ನವದೆಹಲಿ: ಕೋಕಾ-ಕೋಲಾ ಮತ್ತು ಥಮ್ಸ್ ಅಪ್ ಪಾನೀಯವನ್ನು ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್ 5 ಲಕ್ಷ ರೂ. ದಂಡವನ್ನು ವಿಧಿಸಿದೆ.
ಉಮೇದ್‌ಸಿನ್ಹಾ ಎಂಬವರು ಕೋಕಾ-ಕೋಲಾ ಮತ್ತು ಥಮ್ಸ್ ಅಪ್ ಪಾನೀಯವನ್ನು ನಿಷೇಧಿಸುವಂತೆ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್, ಹೇಮಂತ್ ಗುಪ್ತಾ, ಅಜಯ್ ರಸ್ತೋಗಿ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.
Advertisement
Advertisement
ಈ ವೇಳೆ ಪಾನೀಯ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾಕ್ಷ್ಯಗಳು ಪರಿಪೂರ್ಣವಾಗಿಲ್ಲ. ಅಷ್ಟೇ ಅಲ್ಲದೇ ಈ ಎರಡೂ ಬ್ರಾಂಡ್ ಗಳನ್ನು ಮಾತ್ರ ಗುರಿಯಾಗಿಸಿದ್ದು ಯಾಕೆ ಎಂದು ಪೀಠ ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿದೆ.
Advertisement
ಪರಿಚ್ಚೇಧ 32ರ ಅಡಿ ಹಕ್ಕು ಇದೆ ಎಂದು ಎಲ್ಲ ವಿಚಾರಕ್ಕೂ ಪಿಐಎಲ್ ಸಲ್ಲಿಸುವುದು ಸರಿಯಲ್ಲ. ಯಾವುದೇ ತಾಂತ್ರಿಕ ಜ್ಞಾನ ಇಲ್ಲದೇ ಈ ರೀತಿಯ ಅರ್ಜಿ ಸಲ್ಲಿಸಿ ಕೋರ್ಟ್ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ 5 ಲಕ್ಷ ರೂ. ದಂಡವನ್ನು ವಿಧಿಸುತ್ತಿದ್ದೇವೆ. ಒಂದು ತಿಂಗಳ ಒಳಗಡೆ ದಂಡವನ್ನು ಸುಪ್ರೀಂ ಕೋರ್ಟ್‌ಗೆ ಪಾವತಿಸಬೇಕು ಎಂದು ಪೀಠ ಸೂಚಿಸಿದೆ.
Advertisement
ಅರ್ಜಿದಾರರು ಕೋಕಾ-ಕೋಲಾ ಮತ್ತು ಥಮ್ಸ್ ಅಪ್ ಕಂಪನಿಗಳ ಪಾನೀಯ ಮಾರಾಟಕ್ಕೆ ಕೇಂದ್ರ ಸರ್ಕಾರ ನೀಡಿರುವ ವೈಜ್ಞಾನಿಕ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ಆದೇಶಿಸಬೇಕೆಂದು ಮನವಿ ಮಾಡಿದ್ದರು.