ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸೋಂಕಿತರ ಸಂಖ್ಯೆ ಕಡಿಮೆಯಾಗಲಿ ಎಂದು ಸಚಿವ ಈಶ್ವರಪ್ಪ ಹೋಮದ ಮೊರೆ ಹೋಗಿದ್ದಾರೆ.
ಶಿವಮೊಗ್ಗದ ಶುಭಮಂಗಳ ಸಮುದಾಯ ಭವನದ ಆವರಣದಲ್ಲಿರುವ ದೇವಾಲಯದಲ್ಲಿ, ಧನ್ವಂತರಿ ಹೋಮ ಆಯೋಜಿಸಿ, ಪೂಜೆ ನೆರವೇರಿಸಿದ್ದಾರೆ. ಸೇವಾ ಭಾರತಿ ಹಾಗೂ ಕೋವಿಡ್ ಸುರಕ್ಷಾ ಪಡೆ ವತಿಯಿಂದ ಆಯೋಜಿಸಿದ್ದ ಧನ್ವಂತರಿ ಹೋಮದಲ್ಲಿ, ಸಚಿವ ಈಶ್ವರಪ್ಪ ಕುಟುಂಬ ಸಮೇತ ಭಾಗವಹಿಸಿ, ಪೂಜೆ ನೆರವೇರಿಸಿದ್ದಾರೆ.
ಈಶ್ವರಪ್ಪ ದಂಪತಿ ಸಮೇತ ಪೂರ್ಣಾಹುತಿ ನೆರವೇರಿಸಿ, ಏನಾದರೂ ಮಾಡಿ, ಕೊರೋನಾ ಸೋಂಕಿತರ ಸಂಖ್ಯೆ ಇಳಿಸಪ್ಪಾ ದೇವ್ರೇ ಅಂತಾ ಭಗವಂತನಿಗೆ ನಮಿಸಿದ್ದಾರೆ.