ಅಮರಾವತಿ: ಕೊರೊನಾ ಸೋಂಕಿತ ತಂದೆ ನೆಲದಲ್ಲಿ ಬಿದ್ದು ಒದ್ದಾಡುತ್ತಿದ್ದಂತೆ ಅವರಿಗೆ ನೀರು ಕೊಡಲು ಮುಂದಾದ ಮಗಳನ್ನು ತಾಯಿ ತಡೆಹಿಡಿದು ಮಗಳನ್ನು ಸೋಂಕಿತರಿಂದ ದೂರ ಇರಿಸಲು ಪಡುವ ಕಷ್ಟ, ತಂದೆಯನ್ನು ಕಳೆದುಕೊಂಡ ಮಗಳ ಆಕ್ರಂದನ ಈ ಕರುಣಾಜನಕ ಸ್ಥಿತಿ ಆಂಧ್ರಪ್ರದೇಶದಲ್ಲಿ ಕಂಡುಬಂದಿದೆ.
Advertisement
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ, ಜಿ ಸಿಗಡಂ ಮಂಡಲದ, ಕೊಯನಪೇಟ ಮೂಲದ ಅಸಿರನೈಡು(50) ಕೊರೊನಾ ಸೋಂಕಿಗೆ ಒಳಗಾಗಿ ತನ್ನ ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳ ಮುಂದೆ ನರಳಾಡಿ ಸಾವನ್ನಪ್ಪಿದ್ದಾರೆ.
Advertisement
ತಂದೆ ಸೋಂಕಿನ ತೀವ್ರತೆಯಿಂದ ಉಸಿರಾಡಲಾಗದೆ ನೆಲದ ಮೇಲೆ ಬಿದ್ದು ಹೊರಳಾಡುತ್ತಿದ್ದಂತೆ ಮಗಳು ತಂದೆಯ ನರಳಾಟ ನೋಡಲಾಗದೆ ನೀರು ಕೊಡಲು ಮುಂದಾಗುತ್ತಾಳೆ. ಆದರೆ ತಾಯಿ ಮಗಳನ್ನು ಹಿಡಿದುಕೊಂಡು ನೀರು ಕೊಡಲು ಬಿಡದೆ ಆಕೆಯ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ತಾಯಿಯ ಬಳಿಯಿದ್ದ ನೀರಿನ ಬಾಟಲ್‍ನ್ನು ಕಸಿದುಕೊಂಡು ತಂದೆಗೆ ನೀರು ಕೊಟ್ಟು ಅಳುತ್ತಿರುವ ದೃಶ್ಯ ನೋಡುಗರ ಕಣ್ಣಲ್ಲಿ ನೀರು ತರಿಸಿದೆ.
Advertisement
Advertisement
ಕೊರೊನಾದಿಂದ ಮರಣ ಹೊಂದಿದ ಅಸಿರನೈಡು ವಿಜಯವಾಡದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಳಿಕ ಅವರ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದೆ. ಕುಟುಂಬದವರೆಲ್ಲ ಕೊರೊನಾದಿಂದ ಚೇತರಿಕೆ ಕಂಡರು ಕೂಡ ಅಸಿರನೈಡು ಅವರಿಗೆ ಸೋಂಕು ಹೆಚ್ಚಾಗಿ ಉಸಿರಾಡಲಾಗದೆ ಮನೆಯವರ ಮುಂದೆಯೇ ಕೊನೆಯುಸಿರೆಳೆದಿದ್ದಾರೆ.