ಹಾಸನ: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಾಸನ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಮಾಡಲು ಹಾಸನ ಜಿಲ್ಲಾಡಳಿತ ಮತ್ತೊಂದು ಕೋವಿಡ್ ಸೆಂಟರ್ ಓಪನ್ ಮಾಡಿದೆ.
ಹಾಸನ ನಗರದ ಹೃದಯ ಭಾಗದಲ್ಲಿರುವ ಮಂಜುನಾಥ ಆಯುರ್ವೇದಿಕ್ ಆಸ್ಪತ್ರೆಯ ಒಂದು ಭಾಗವನ್ನು ತೆಗೆದುಕೊಂಡಿದ್ದು, ಮೂನ್ನೂರು ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಕಲ ವ್ಯವಸ್ಥೆ ಮಾಡಿದ್ದಾರೆ. ಒಂದು ರೂಮಿನಲ್ಲಿ ಮೂವರು ಕೋವಿಡ್ ರೋಗಿ ಹೊರತು ಪಡಿಸಿ ಬೇರೆಯವರಿಗೆ ಈ ಆಸ್ಪತ್ರೆಯಲ್ಲಿ ಪ್ರವೇಶವಿಲ್ಲ.
Advertisement
Advertisement
ಕೊರೊನಾ ಸೋಂಕಿನ ಲಕ್ಷಣ ಇಲ್ಲದೇ ಪಾಸಿಟಿವ್ ಬಂದಿರುವ ವ್ಯಕ್ತಿಗಳಿಗೆ ಹೊಸ ಕೋವಿಡ್ ಆಸ್ಪತ್ರೆ ಮಾಡಲಾಗಿದೆ. ಹಾಸನದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇಂದಿನಿಂದ ಮತ್ತೊಂದು ಹೊಸ ಕೋವಿಡ್ ಸೆಂಟರ್ ಕಾರ್ಯನಿರ್ವಹಿಸಲಿದೆ. ಈ ಮೂಲಕ ಹಾಸನದಲ್ಲಿ ಕೋವಿಡ್ ಸೋಂಕಿತರಿಗಾಗಿ ಸುಮಾರು 700ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಿದಂತಾಗಿದೆ.