ಬೆಂಗಳೂರು: ಮಾಹಾಮಾರಿ ಕೊರೊನಾ ವೈರಸ್ ಗೆ ರಾಜ್ಯದಲ್ಲಿ ಹಲವು ಮಂದಿ ಬಲಿಯಾಗಿದ್ದು, ಇದರಲ್ಲಿ ಕೆಲವು ಸೋಂಕಿತರು ಹೃದಯಾಘಾತದಿಂದ ಮೃತಪಟ್ಟವರೂ ಇದ್ದಾರೆ.
ಹೌದು. ಕೊರೊನಾ ಸೋಂಕಿತರಿಗೆ ಹೃದಯಾಘಾತ ಸಾಧ್ಯತೆ ಹೆಚ್ಚಿರುತ್ತೆ. ಯಾಕಂದರೆ ಕೊರೊನಾ ಶ್ವಾಸಕೋಶಕ್ಕೆ ಹಾನಿ ಮಾಡುತ್ತೆ. ಶ್ವಾಸಕೋಶದಲ್ಲಿ ಕೊರೊನಾ ಸೋಂಕಾದಾಗ ಉಸಿರಾಟದ ಸಮಸ್ಯೆಯಾಗುತ್ತೆ. ನಂತರ ಉಸಿರಾಟದ ಸಮಸ್ಯೆ ಉಂಟಾದಾಗ ಬ್ಲಡ್ ಸಕ್ರ್ಯುಲೇಶನ್ ಏರುಪೇರಾಗುತ್ತೆ. ಇದು ಹೃದಯದ ಮೇಲೆ ಒತ್ತಡವೇರುತ್ತದೆ. ಈ ಕಾರಣದಿಂದ ಹೃದಯಾಘಾತಕ್ಕೆ ಕಾರಣವಾಗಿ ಸೋಂಕಿತ ಸಾವಿಗೀಡಾಗುತ್ತಾನೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಒಟ್ಟಿನಲ್ಲಿ ಕೊರೊನಾ ನೇರವಾಗಿ ಹೃದಯಕ್ಕೆ ಹಾನಿ ಮಾಡದಿದ್ರೂ, ಶ್ವಾಸಕೋಶದ ಮೂಲಕ ಹಾನಿ ಮಾಡುತ್ತೆ. ಹೀಗಾಗಿ ಕೆಲವು ರೋಗಿಗಳು ಹೃದಘಾತಕ್ಕೆ ಒಳಗಾಗುತ್ತಾರೆ ಎನ್ನಲಾಗುತ್ತಿದೆ.
ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಬುಲೆಟಿನ್ ಪ್ರಕಾರ ರಾಜ್ಯದಲ್ಲಿ ಗುರುವಾರ 210 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 7,944ಕ್ಕೆ ಏರಿಕೆಯಾಗಿದೆ. ಬಳ್ಳಾರಿ 48, ಕಲಬುರಗಿ 48, ದಕ್ಷಿಣ ಕನ್ನಡ 23, ರಾಮನಗರ 21, ಬೆಂಗಳೂರು ನಗರ 17, ಯಾದಗಿರಿ 8, ಮಂಡ್ಯ 7, ಬೀದರ್ 6, ಗದಗ 5, ರಾಯಚೂರು 4, ಹಾಸನ 4, ಧಾರವಾಡ 4, ದಾವಣಗೆರೆ 3, ಚಿಕ್ಕಮಗಳೂರು 3, ವಿಜಯಪುರ 2, ಉತ್ತರ ಕನ್ನಡ 2, ಮೈಸೂರು 2, ಬಾಗಲಕೋಟೆ, ಶಿವಮೊಗ್ಗ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಕೋವಿಡ್19 ಮಾಹಿತಿ: 18ನೇ ಜೂನ್ 2020
ಒಟ್ಟು ಪ್ರಕರಣಗಳು: 7944
ಮೃತಪಟ್ಟವರು: 114
ಗುಣಮುಖರಾದವರು: 4983
ಹೊಸ ಪ್ರಕರಣಗಳು: 210
ಇತರೆ ಮಾಹಿತಿ: ಜಿಲ್ಲಾವಾರು ಸೋಂಕಿತರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.1/2 pic.twitter.com/q4zuJTHd4X
— CM of Karnataka (@CMofKarnataka) June 18, 2020
ನಿನ್ನೆ 179 ಮಂದಿ ಕೊರೊನಾದಿಂದ ಗುಣಮುಖರಾಗಿ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು 7,944 ಸೋಂಕಿತರಲ್ಲಿ 2,843 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, 4,983 ಜನರು ಡಿಸ್ಚಾರ್ಜ್ ಆಗಿದ್ದಾರೆ.