ಬೆಂಗಳೂರು: ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಎಡವಟ್ ನಿರ್ಧಾರಗಳಿಂದ ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಓಟಕ್ಕೆ ಬ್ರೇಕ್ ಸಿಗುತ್ತಿಲ್ಲ. ಕೊರೊನಾ ಸೋಂಕಿತರಿಗೆ ಬೆಡ್, ಸರಿಯಾದ ಊಟ, ಚಿಕಿತ್ಸೆ ಸಿಗದೇ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ಸರ್ಕಾರದ ಮತ್ತೊಂದು ಹೈಫೈ ಅನ್ಯಾಯ ಬೆಳಕಿಗೆ ಬಂದಿದೆ.
ಕೊರೊನಾ ಸೋಂಕಿತರು ಬೆಡ್ ಸಿಗದೇ ನಡುರಸ್ತೆಯಲ್ಲಿ ಕಾಯುವಂತಾಗಿದೆ. ಇನ್ನು ಕೆಲವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಇದೀಗ ರಾಜಕಾರಣಿಗಳಿಗೆ ಮಾತ್ರ ಸರ್ಕಾರ ಮುಂಗಡ ಬೆಡ್ ಗಳನ್ನು ಬುಕ್ ಮಾಡಿಕೊಂಡಿರುವ ವಿಷಯ ರಿವೀಲ್ ಆಗಿದೆ.
ಶಾಸಕರು, ಅಧಿಕಾರಿಗಳು ಕೊರೊನಾಗೆ ತುತ್ತಾದರೆ ಕುಮಾರಕೃಪದಲ್ಲಿ ಚಿಕಿತ್ಸೆ ನೀಡಲು ಸಿದ್ಧತೆ ನಡೆಸಿದೆ. ಹೋಟೆಲ್ ನ 100 ಕೊಠಡಿಗಳನ್ನು ಬುಕ್ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬಡವರಿಗೊಂದು, ರಾಜಕಾರಣಿಗಳಿಗೊಂದು ಚಿಕಿತ್ಸೆ ನೀಡಲು ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.