ಬೆಂಗಳೂರು: ಮೂರನೇ ಅಲೆ ಮಕ್ಕಳಿಗೆ ಬರಬಹುದು. ತಜ್ಞರು ಸಹ ಇದನ್ನ ಹೇಳಿದ್ದಾರೆ. ಜುಲೈ, ಆಗಸ್ಟ್, ಸೆಪ್ಟೆಂಬರ್ ಮೂರು ತಿಂಗಳು ಇದೆ. ಮೂರು ಸಮಯ ಇದೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬೆಡ್ ಆಕ್ಸಿಜನ್ ಎಲ್ಲವೂ ಸಿದ್ಧತೆ ಮಾಡಿಕೊಳ್ಳಬೇಕು. 12 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಕೊಡಬಹುದು. ಗರ್ಭಿಣಿ ಸ್ತ್ರೀಯರಿಗೂ ಸಹ ಲಸಿಕೆ ಹಾಕಬಹುದು. ಆದ್ರೆ ಕೊಡ್ತಿಲ್ಲ ಹೀಗಾಗಿ ಮಕ್ಕಳ ಮೇಲೆ ಮೂರನೇ ಅಲೆ ಬರುತ್ತೆ ಎಂದು ತಜ್ಞರು ಹೇಳುತ್ತಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ಮಕ್ಕಳಿಗೆ ವ್ಯಾಕ್ಸಿನ್ ಹಾಕದ ಕಾರಣ ಅವರ ಮೇಲೆ ಪರಿಣಾಮ ಆಗಲಿದೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದಿದ್ದಾರೆ.
Advertisement
Advertisement
ಕೊರೊನಾ ಸಂತ್ರಸ್ತರ ಮನೆಗೆ ಕಾಂಗ್ರೆಸ್ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹೈಕಮಾಂಡ್ ನಿಂದ ಆದೇಶ ಬಂದಿದ್ದು, ಕೊರೊನಾ ಸಂತ್ರಸ್ತರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ. ಪರಿಹಾರ ನೀಡಿ ಅವರ ದುಃಖದಲ್ಲಿ ಭಾಗಿಯಾಗಿ, ದಿನಸಿ ಸಾಮಗ್ರಿಗಳನ್ನು ನೀಡಲು ಹೇಳಿದ್ದಾರೆ. ಜುಲೈ ಒಂದರಿಂದ ಪ್ರತಿಯೊಬ್ಬ ಸಂತ್ರಸ್ತರ ಮನೆಗೆ ಭೇಟಿ ನೀಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್ಗೆ ಇರಿಸು ಮುರಿಸು– ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಅಧಿಕಾರಿಗೆ ಸೂಚನೆ
Advertisement
ಪಂಚೇಂದ್ರಿಯಗಳಿಲ್ಲದ ದಪ್ಪ ಚರ್ಮದ ಸರ್ಕಾರ ರಾಜ್ಯದಲ್ಲಿದೆ: ಎಸ್.ಆರ್.ಪಾಟೀಲ್https://t.co/2QLVz1n4Gd#SRPatil #Raichur #Congress #BJP #KannadaNews @srpatilbagalkot @BJP4Karnataka @INCKarnataka
— PublicTV (@publictvnews) June 29, 2021