ಬೆಂಗಳೂರು: ಕೋವಿಡ್ ನಿಯಂತ್ರಣ ಪರಿಕರ ಖರೀದಿಯಲ್ಲಿ ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಪ್ರಕರಣ ದಾಖಲಾಗಿದೆ.
ಅಂಬುಲೆನ್ಸ್, ಪಿಪಿಇ ಕಿಟ್, ವೆಂಟಿಲೇಟರ್ ಖರೀದಿಯಲ್ಲಿ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್ ಕೆ ಪಾಟೀಲ್ ದೂರಿನನ್ವಯ ಪ್ರಕರಣ ದಾಖಲಾಗಿದೆ. ಗೌರವಯುತ ಶವಸಂಸ್ಕಾರ ನಡೆಯದ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಿರುವ ಎಚ್.ಕೆ. ಪಾಟೀಲ್ ಆಗಸ್ಟ್ 3 ರಂದು ಆಯೋಗದ ಮುಂದೆ ಹಾಜರಾಗಲಿದ್ದಾರೆ.
Advertisement
Advertisement
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಕೆ.ಪಾಟೀಲ್, ಜುಲೈ 15ಕ್ಕೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು ಮಾನವ ಹಕ್ಕುಗಳು ಉಲ್ಲಂಘನೆಯಾದಾಗ ಆಯೋಗ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದೆ. ಅಂಬುಲೆನ್ಸ್ ಸಿಗದೇ ಮೃತಪಟ್ಟಿದ್ದಾರೆ. ಶವ ಸಂಸ್ಕಾರ ಸರಿಯಾಗಿ ಮಾಡಲಿಲ್ಲ. ರೋಗಿಗೆ ಸಿಗಬೇಕಾದ ನ್ಯಾಯಯುತ ಸೌಲಭ್ಯ ಸಿಗದ ಹಿನ್ನೆಲೆಯಲ್ಲಿ ಪತ್ರ ಬರೆದು ಇದನ್ನೇ ದೂರು ಎಂದು ಪರಿಗಣಿಸಬೇಕೆಂದು ಮನವಿ ಮಾಡಿದ್ದೆ ಎಂದರು.
Advertisement
ನಾನು ಹಲವು ಪತ್ರಗಳನ್ನ ಸರ್ಕಾರಕ್ಕೆ ಬರೆದಿದ್ದು, ಕೆಲ ಪತ್ರಗಳಿಗೆ ಉತ್ತರ ನೀಡಿದ್ದಾರೆ. ಕೆಲ ಪ್ರಶ್ನೆಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೊರೊನಾ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೊರೊನಾ ಕೇರ್ ಸೆಂಟರ್‌ನಲ್ಲಿ 10 ಸಾವಿರ ಬೆಡ್ ಹಾಕ್ತೀವಿ ಅಂತ ಹೇಳಿ ಎಷ್ಟು ದಿನವಾಯಿತು ಎಂದು ಪ್ರಶ್ನಿಸಿದರು.
Advertisement
ಕೇರ್ ಲೇಸ್ ಆಗಿ ಸರ್ಕಾರ ನಡೆದುಕೊಳ್ಳುವುದು ಬೇಡ. ಸರ್ಕಾರ ನೀಡಿದ ಲೀಗಲ್ ನೋಟಿಸ್ ಬಗ್ಗೆ ಪಕ್ಷದ ಮಟ್ಟದಲ್ಲಿ ಚರ್ಚೆ ಮಾಡುತ್ತೇವೆ. ನೋಟಿಸ್ ಕೊಟ್ಟು ಕಾಂಗ್ರೆಸ್ ಧ್ವನಿ ಅಡಗಿಸಲು ಸಾಧ್ಯವಿಲ್ಲ. ಮೂರನೇ ತಾರೀಖು ವಿಚಾರಣೆ ಹಾಜರಾಗಿ ನನ್ನ ಬಳಿ ಇರುವ ದಾಖಲೆಯನ್ನ ಕೊಡುತ್ತೇನೆ ಎಂದು ತಿಳಿಸಿದರು.