ಚಿಕ್ಕಮಗಳೂರು: ಕೊರೊನಾ ಬಿಜೆಪಿಯವರಿಗೆ ಮಾತ್ರ ಬರುತ್ತಾ ಇಲ್ಲ ಎಲ್ಲರಿಗೂ ಬರುತ್ತಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.
Advertisement
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ ರವಿ ಅವರು, ಇದೇ ತಿಂಗಳು 18ರಂದು ನಡೆಯುವ ಸರ್ವಪಕ್ಷ ಸಭೆಗೆ ಏಕೆ ಹೋಗಬೇಕು ಎಂದು ಪ್ರಶ್ನಿಸಿದ್ದ ಡಿ.ಕೆ.ಶಿವಕುಮಾರ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಖಾರವಾಗಿ ಕಿಡಿ ಕಾರಿದ್ದು, ಇಂದು ಸಂಖ್ಯಾಬಲದಿಂದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾದರೆ ಕಾಂಗ್ರೆಸ್-ಜೆಡಿಎಸ್‍ಗೆ ರಾಜ್ಯದ ಬಗ್ಗೆ ಜವಾಬ್ದಾರಿ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಕೊರೊನಾ ವೈರಸ್ ಬಿಜೆಪಿ ಬೆಂಬಲಿಗರಿಗೆ ಮಾತ್ರ ಬರುತ್ತೋ ಅಥವಾ ಎಲ್ಲರಿಗೂ ಬರುತ್ತೋ ಎಂದು ಕಾಂಗ್ರೆಸ್-ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿ, ಕೊರೊನಾ ಬಿಜೆಪಿ-ಜೆಡಿಎಸ್-ಕಾಂಗ್ರೆಸ್ ಸೇರಿದಂತೆ ಎಲ್ಲರಿಗೂ ಬಂದಿದೆ. ರಾಜಕಾರಣಕ್ಕೆ ಸಂಬಂಧವೇ ಇಲ್ಲದವರಿಗೂ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾವೇ ರಾಜಕಾರಣ ಮಾಡಿಲ್ಲ ಇವರೇಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಇವರು ರಾಜಕಾರಣವನ್ನೇ ಮಾಡಬೇಕು ಎಂದರೆ ಬೇರೆ ಸಾಕಷ್ಟು ವಿಷಯಗಳಿವೆ ಅಲ್ಲಿ ಮಾಡಲಿ. ಇದು ರಾಜಕಾರಣ ಮಾಡುವ ವಿಷಯವಲ್ಲ. ಇದರಲ್ಲೂ ರಾಜಕಾರಣದ ಬಳಕೆ ದುರದೃಷ್ಟಕರ ಸಂಗತಿಯಾಗಿದೆ. ಸರ್ಕಾರ ವ್ಯವಸ್ಥೆ ನಿರ್ಮಾಣ ಮಾಡಬೇಕು. ಅದರ ನಿಯಂತ್ರಣ ಎಲ್ಲರ ಸಹಕಾರದಿಂದಲೇ ಆಗಬೇಕು. ಇದು ರಾಜಕಾರಣದ ವಿಷಯವಲ್ಲ. ಇಲ್ಲಿ ರಾಜಕಾರಣ ಮಾಡೋದು ಬಿಟ್ಟು ಸಲಹೆ-ಸಹಕಾರ ಕೊಡಲಿ. ಅದು ಸೂಕ್ತವಾಗಿದ್ದಾರೆ, ಅದನ್ನು ಸ್ವೀಕರಿಸುವ ಮನಸ್ಸು ಸರ್ಕಾರಕ್ಕೂ ಇರಬೇಕು ಎಂದು ಅಭಿಪ್ರಾಯಪಟ್ಟರು.
Advertisement