ತುಮಕೂರು: ಮಹಾಮಾರಿ ಕೊರೊನಾ ಓಡಿಸಲು ಪಾವಗಡ ತಾಲೂಕಿನ ಬಲ್ಲೇನಹಳ್ಳಿ ಜನರು ದೇವರ ಮೊರೆ ಹೋಗಿದ್ದಾರೆ.
ಗ್ರಾಮದ ಮಾರಮ್ಮ ದೇವಿ ಹಾಗೂ ರಕ್ಷಾ ಕಲ್ಲಿಗೆ ಪೂಜೆ ಸಲ್ಲಿಸಿ ಜನರು ಕೊರೊನಾ ದೂರ ಮಾಡುವಂತೆ ಪ್ರಾರ್ಥನೆ ಮಾಡಿದ್ದಾರೆ. ಪುರುಷರು ಮಾತ್ರ ಈ ಪೂಜೆಯಲ್ಲಿ ಪಾಲ್ಗೊಂಡಿದ್ದು ಮೊದಲು ಗ್ರಾಮ ದೇವರಿಗೆ ನಂತರ ರಕ್ಷಾ ಕಲ್ಲಿಗೆ ಎಡೆ ಇಟ್ಟು ಪೂಜೆ ಮಾಡಿದ್ದಾರೆ.
Advertisement
Advertisement
ಮರದಲ್ಲಿ ರಾಗಿ ಮುದ್ದೆ, ಬೇವಿನ ಸೊಪ್ಪು ಇಟ್ಟು, ಮಾರಮ್ಮನ ದೇವಾಲಯದ ಪ್ರದಕ್ಷಿಣೆ ಹಾಕಿ ಭಕ್ತಿ ಮೆರೆದಿದ್ದಾರೆ. ಪಕ್ಕದ ಗ್ರಾಮ ತಿಪ್ಪಗಾನಹಳ್ಳಿಯಲ್ಲಿ ಇದೇ ರೀತಿ ಆಚರಿಸಿದ್ದಾರೆಂದು ಇಲ್ಲಿಯೂ ಆಚರಣೆ ಮಾಡಿದ್ದಾರೆ.
Advertisement
Advertisement
ಸುಮಾರು 20 ಜನ ಕೊರೊನಾ ಸೋಂಕಿತರು ಬಲ್ಲೇನಹಳ್ಳಿ ಗ್ರಾಮದಲ್ಲಿದ್ದರು. ಹಾಗಾಗಿ ಗ್ರಾಮಸ್ಥರು ಪೂಜೆ ಮಾಡಿ ನಮ್ಮವರಿಗೆ ಬಂದ ಕೊರೊನಾ ದೂರವಾಗಲಿ ಎಂದು ಪ್ರಾರ್ಥಿಸಿದ್ದರು. ಪರಿಣಾಮ ಈಗ 20 ಜನ ಗುಣಮುಖರಾಗಿ ವಾಪಸ್ಸಾಗಿದ್ದಾರೆ ಎಂಬುವುದು ಗ್ರಾಮಸ್ಥರ ನಂಬಿಕೆ. ಇದನ್ನೂ ಓದಿ: ಒಂದೆರಡು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಕೋವಿಡ್ ಲಸಿಕೆ ಲಭ್ಯ: ಸಿಎಂ ಯಡಿಯೂರಪ್ಪ