ಕೊರೊನಾ ಗೆದ್ದು ಬಂದವರಿಂದ್ಲೇ ಜಾಗೃತಿ- ಜಿಲ್ಲಾಡಳಿತದಿಂದ ವಿನೂತನ ಪ್ರಯತ್ನ

Public TV
2 Min Read
HBL CORONA 1

ಹುಬ್ಬಳ್ಳಿ: ಕೊರೊನಾ ಭಯವನ್ನು ಹೋಗಲಾಡಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ಆತ್ಮಸ್ಥೈರ್ಯ ಹೆಚ್ಚಿಸಲು ಜಿಲ್ಲಾಡಳಿತವು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ವಿನೂತನ ಪ್ರಯತ್ನವನ್ನು ಕೈಗೆತ್ತಿಕೊಂಡಿದೆ. ಈ ಮೂಲಕ ಜನರಲ್ಲಿರುವ ಆತಂಕ ದೂರ ಮಾಡುವ ಮಾರ್ಗವಾಗಿದೆ.

CORONA VIRUS 5

ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದವರ ವಿಶೇಷ ತಂಡಗಳನ್ನು ರಚಿಸಿ, ಎನ್‍ಜಿಒ ಸಹಭಾಗಿತ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಆತ್ಮಸ್ಥೈರ್ಯ ಮೂಡಿಸುವ ಯೋಜನೆಯೊಂದನ್ನು ಜಿಲ್ಲಾಡಳಿತ ರೂಪಿಸಿದ್ದು, ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಗೆ ಬಂದವರೇ ಇದಕ್ಕೆ ಸಾಕ್ಷಿಯಾಗಿದೆ. ಬೀದಿ ನಾಟಕ, ಜಾಗೃತಿ ಜಾಥಾ, ಫೇಸ್‍ಬುಕ್ ಲೈವ್, ವಿಡಿಯೊ ಸಂದೇಶ ಹೀಗೆ ವಿವಿಧ ಯೋಜನೆಗಳನ್ನು ಜಿಲ್ಲಾಡಳಿತ ಹಾಕಿಕೊಂಡಿದೆ.

HBL CORONA 2

ಈ ಕುರಿತು ಈಗಾಗಲೇ ಯೋಜನೆಯ ರೂಪರೇಷೆಗಳನ್ನು ಸಿದ್ಧಪಡಿಸಲಾಗಿದೆ. ಗುಣಮುಖರಾದವರಲ್ಲಿ ಆಸಕ್ತ ಹಾಗೂ ಸುಶಿಕ್ಷತರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಯೋಜನೆಯ ಮಾಹಿತಿ ಹಾಗೂ ತರಬೇತಿ ನೀಡಲಾಗುತ್ತದೆ. ಹತ್ತು, ಹದಿನೈದು ಮಂದಿಯ ಒಂದೊಂದು ತಂಡಗಳನ್ನಾಗಿ ಮಾಡಿ ವಾರ್ಡ್ ಮಟ್ಟದಲ್ಲಿ ಅಂತರ ಕಾಯ್ದುಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಿದೆ.

H

ಕೋವಿಡ್ ಲಕ್ಷಣ ರಹಿತ ಸೋಂಕಿತರಾಗಿ ಗುಣಮುಖರಾದವರೇ ಈ ತಂಡದಲ್ಲಿ ಇರುವುದರಿಂದ, ಅವರು ಕೋವಿಡ್ ಕೇರ್ ಸೆಂಟರ್‍ಗಳಲ್ಲಿ ಕಳೆದ ದಿನಗಳ ಅನುಭವ ಹಾಗೂ ಅಲ್ಲಿಯ ವ್ಯವಸ್ಥೆ, ಆರೋಗ್ಯ ಇಲಾಖೆಯ ಆರೈಕೆ ಹಾಗೂ ಅಲ್ಲಿ ಆತ್ಮಸ್ಥೈರ್ಯಕ್ಕಾಗಿ ಹಮ್ಮಿಕೊಂಡಿರುವ ಚಟುವಟಿಕೆಗಳಿಂದ ತಮ್ಮಲ್ಲಾದ ಬದಲಾವಣೆಗಳನ್ನು ಸಮಾಜಕ್ಕೆ ತಿಳಿಸಲಿದ್ದಾರೆ. ಕೋವಿಡ್ ಮಾರಾಣಾಂತಿಕವಲ್ಲ, ಅದು ಗುಣಪಡುವ ಕಾಯಿಲೆ ಎಂದು ಜನರಿಗೆ ತಿಳಿಸಲು ಅವರೇ ಮುಂಚೂಣಿಯಲ್ಲಿ ನಿಂತು ಹೇಳಿದರೆ ಉತ್ತಮ ಎನ್ನುವ ನಿಟ್ಟಿನಲ್ಲಿ ಈ ಯೋಜನೆ ಹಮ್ಮಿಕೊಂಡಿದೆ.

HBL CORONA

ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗುತ್ತಿದೆ. ಆದರೆ, ಆತಂಕ ಪಡುವ ಅಗತ್ಯವೇನೂ ಇಲ್ಲ. ಒಬ್ಬರಿಂದ ಒಬ್ಬರಿಗೆ ಹರಡುವ ಅಂಟುರೋಗ ಎನ್ನುವುದೊಂದು ಬಿಟ್ಟರೆ, ಜ್ವರ, ಶೀತ, ನೆಗಡಿಯಂಥ ಸಾಮಾನ್ಯ ಕಾಯಿಲೆ ಇದಾಗಿದ್ದು, ಈಗಾಗಲೇ ಅವಳಿ ನಗರ ಸೇರಿದಂತೆ ಜಿಲ್ಲೆಯ ಐದುನೂರಕ್ಕೂ ಹೆಚ್ಚು ಎನ್‍ಜಿಒಗಳು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿವೆ. ಕೆಲವು ಎನ್‍ಜಿಒಗಳು ಕೋವಿಡ್‍ನಿಂದ ಚೇತರಿಸಿಕೊಂಡ ಜನಪ್ರತಿನಿಧಿಗಳ, ಸಮಾಜದ ಮುಖಂಡರ, ಗಣ್ಯರ ಅನುಭವಗಳನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಮುಂದೆ ಬಂದಿವೆ.

CORONA VIRUS 1

Share This Article
Leave a Comment

Leave a Reply

Your email address will not be published. Required fields are marked *