ಹೈದರಾಬಾದ್: ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಮನೆಯಲ್ಲಿ ಐಸೋಲೇಷನ್‍ನಲ್ಲಿರುವಂತೆ ಸೂಚನೆ ನೀಡಿದ ವೇಳೆ ಮನೆಯಲ್ಲಿ ಐಸೋಲೇಷನ್ ಆಗುವಷ್ಟು ಸೌಕರ್ಯ ಇಲ್ಲದೆ ಹನ್ನೊಂದು ದಿನಗಳ ಕಾಲ ಮರದ ಮೇಲೆ ದಿನಕಳೆದ ಪ್ರಸಂಗವೊಂದು ವರದಿಯಾಗಿದೆ.
Advertisement
ತೆಲಂಗಾಣದ ನಲಗೊಂಡ ಜಿಲ್ಲೆಯ ಕೊಥಾನಂದಿಕೊಂಡ ಗ್ರಾಮದಲ್ಲಿ ವಾಸವಿರುವ ಶಿವ ಎಂಬ ವಿದ್ಯಾರ್ಥಿಯೊರ್ವನಿಗೆ ಕೆಲದಿನಗಳ ಹಿಂದೆ ಕೊರೊನಾ ದೃಢಪಟ್ಟಿತ್ತು. ಬಳಿಕ ಅಲ್ಲಿನ ಆರೋಗ್ಯ ಇಲಾಖೆ ಮತ್ತು ಸ್ಥಳೀಯರು ಐಸೋಲೆಷನ್‍ನಲ್ಲಿ ಇರುವಂತೆ ಸೂಚನೆ ನೀಡಿದರು ಆದರೆ ಶಿವ ಅವರ ಮನೆಯಲ್ಲಿ ಒಂದೇ ಕೋಣೆ ಇದ್ದುದರಿಂದಾಗಿ ಆತ ಮರದಲ್ಲಿ 11 ದಿನ ವಾಸವಾಗುವ ಮೂಲಕ ಐಸೋಲೇಷನ್‍ಗೆ ಒಳಗಾಗಿದ್ದಾನೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿದ ಶಿವ, ನಮ್ಮಲ್ಲಿ ಯಾವುದೇ ಐಸೋಲೇಷನ್ ಸೆಂಟರ್ ಗಳಿಲ್ಲ. ನಾವು ಕುಟುಂಬದೊಂದಿಗೆ ವಾಸವಿರುವ ಕಾರಣ ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ. ಹಾಗಾಗಿ ನಾನು ಮರದ ಮೇಲೆ ವಾಸವಾಗಲು ನಿರ್ಧರಿಸಿದೆ.
Advertisement
ಇದಲ್ಲದೆ ಶಿವ ಅವರ ಗ್ರಾಮದಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಬೇಕಾದರೆ 5 ಕಿ.ಮಿ ಕ್ರಮಿಸಬೇಕು. ತುರ್ತು ಚಿಕಿತ್ಸೆಗಾಗಿ 30 ಕಿ.ಮಿ ಕ್ರಮಿಸಬೇಕಾದಂತಹ ಪರಿಸ್ಥಿತಿಯನ್ನು ಗ್ರಾಮಸ್ಥರು ಹೊರಹಾಕಿದ್ದಾರೆ.