ಮಂಗಳೂರು: ನಿತ್ಯ ಸಾವಿರಾರು ಜನರಿಂದ ತುಂಬಿ ತುಳುಕುತ್ತಿದ್ದ ಮಂಗಳೂರಿನ ಪಣಂಬೂರು ಬೀಚ್, ಕೊರೊನಾ ಎರಡನೇ ಅಲೆ ಹಿನ್ನೆಲೆ ವೀಕೆಂಡ್‍ನಲ್ಲಿಯೂ ಬಿಕೋ ಎನ್ನುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಸಹ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
Advertisement
ಕೊರೊನಾದ ಎರಡನೇ ಅಲೆಯ ಎಫೆಕ್ಟ್ ಪ್ರವಾಸಿ ತಾಣಗಳಿಗೂ ತಟ್ಟಿದ್ದು, ರಾಜ್ಯದ ಕರಾವಳಿಯ ಮಂಗಳೂರಿನ ಬೀಚ್ ಬಿಕೋ ಅನ್ನುತ್ತಿದೆ. ಪ್ರತಿ ಭಾನುವಾರ ತುಂಬಿ ತುಳುಕುತ್ತಿದ್ದ ಕಡಲ ತೀರಗಳಲ್ಲಿ ಇಂದು ಕೇವಲ ಬೆರಳೆಣಿಕೆಯ ಪ್ರವಾಸಿಗರು ಮಾತ್ರ ಕಾಣಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನ ಬೀಚ್ ಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಇಂದು ವೀಕೆಂಡ್ ಆಗಿದ್ರೂ ಹೆಚ್ಚಿನ ಜನ ಆಗಮಿಸಿಲ್ಲ. ಜನರೇ ಸ್ವಯಂ ಲಾಕ್‍ಡೌನ್ ಮಾಡಿಕೊಂಡಂತಿದ್ದು, ಮಂಗಳೂರಿನ ಪಣಂಬೂರು ಬೀಚ್ ಬಿಕೋ ಎನ್ನುತ್ತಿದೆ.
Advertisement
Advertisement
ಮೋಜು ಮಸ್ತಿ, ಬೋಟಿಂಗ್‍ಗಾಗಿ ವೀಕೆಂಡ್‍ನಲ್ಲಿ ಹೆಚ್ಚು ಜನ ಬೀಚ್‍ಗೆ ಆಗಮಿಸುತ್ತಿದ್ದರು. ಆದರೆ ಕೊರೊನಾ ತಾಂಡವಾಡುತ್ತಿರುವ ಹಿನ್ನೆಲೆ ಪ್ರವಾಸಿಗರು ಹಾಗೂ ಬೀಚ್‍ಗೆ ಭೇಟಿ ನೀಡುತ್ತಿರುವವರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿದೆ.
Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿತ್ಯ 200-300 ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಹಿನ್ನೆಲೆ ಜನರ ಭಯಭೀತರಾಗಿ ಪ್ರವಾಸಿ ತಾಣಗಳು ಹಾಗೂ ಬೀಚ್‍ಗಳಿಗೆ ಭೇಟಿ ನೀಡುತ್ತಿಲ್ಲ. ಬೋಟಿಂಗ್, ಮೋಜು ಮಸ್ತಿ ಯಾವುದಕ್ಕೂ ಜನ ಆಗಮಿಸುತ್ತಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿದ್ದ ಬೀಚ್‍ಗಳಲ್ಲಿ ಇದೀಗ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಕಾಣಸಿಗುತ್ತಿದ್ದಾರೆ.