– ಸೋಂಕು ಹೆಚ್ಚುತ್ತಿದ್ರೂ, ಮರಣ ಪ್ರಮಾಣ ದರ ಕುಸಿತ
ಬೆಂಗಳೂರು: ಕರ್ನಾಟಕದಲ್ಲಿ ಆರ್ಭಟ ಮುಂದುವರಿದಿದೆ. ಆದರೆ ಕೊರೊನಾ ಆರ್ಭಟದ ನಡುವೆಯೂ ರಾಜ್ಯದಲ್ಲಿ ಮರಣ ಪ್ರಮಾಣ ದರ ಶೇಕಡಾ 4 ಪಟ್ಟು ಕುಸಿತಗೊಂಡಿದೆ.
ರಾಜ್ಯದಲ್ಲಿ ಪ್ರತಿದಿನ 20, 30, 40 ಇರುತ್ತಿದ್ದ ಕೊರೊನಾ ಸಾವು ದಿಢೀರ್ ಇಳಿಮುಖವಾಗಿದೆ. ನಿನ್ನೆ ಕೊರೊನಾ ಸೋಂಕಿನಿಂದ 68 ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ಕೋವಿಡ್‍ಗೆ ಬಲಿಯಾದವರು ಕೇವಲ ಐವರು ಬಲಿಯಾಗಿದ್ದಾರೆ. ಕೋವಿಡ್ ಸೋಂಕು ಹೆಚ್ಚುತ್ತಿದ್ದರು ಸಾವಿನ ಪ್ರಮಾಣ ಇಳಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ 4,683 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
Advertisement
Advertisement
ರಾಜ್ಯದಲ್ಲಿ ಸಾವಿನ ಪ್ರಮಾಣ ಇಳಿಮುಖವಾಗಲು ಪ್ರಮುಖ ಕಾರಣಗಳಿದ್ದು, ಫೀವರ್ ಕ್ಲಿನಿಕ್‍ಗಳಲ್ಲಿ ರ್ಯಾಪಿಡ್ ಟೆಸ್ಟ್ ಹೆಚ್ಚಳ ಮಾಡಲಾಗಿದೆ. ಆರ್‍ಟಿಪಿಸಿ, ಆಂಟಿಜೆನ್ ಟೆಸ್ಟಿಂಗ್ ಹೆಚ್ಚಳವಾಗಿದೆ. ಪ್ರಥಮ, ದ್ವಿತೀಯ ಹಂತದ ಸೋಂಕಿತರು ಹಾಗೂ ಐಎಲ್‍ಐ, ಸಾರಿ ಪ್ರಕರಣ ಮೊದಲೇ ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಲಾಗುತ್ತಿದೆ. ಆಂಬುಲೆನ್ಸ್, ಆಸ್ಪತ್ರೆ ಬೆಡ್ ಸಮಸ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಆಗಿದ್ದು, ಜನರಲ್ಲಿ ಕೊರೊನಾ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಿದೆ. ಈ ಕಾರಣಗಳಿಂದ ರಾಜ್ಯದಲ್ಲಿ ಸಾವಿನ ಪ್ರಮಾಣ ಇಳಿಕೆ ಮುಖವಾಗಿದೆ ಎಂದು ಕೊರೊನಾ ಟಾಸ್ಕ್ ಪೋರ್ಸ್ ಸದಸ್ಯರಾದ ಡಾ.ಗಿರಿಧರ್ ಬಾಬು ಅವರು ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
ಉಳಿದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಶೇ.67.7 ರಷ್ಟಿದ್ದು, ಕಳೆದ 15 ದಿನಗಳಿಂದ ಪಾಸಿಟಿವ್ ಪ್ರಮಾಣ 14.4 ರಷ್ಟು ಹೆಚ್ಚಾಗಿದ್ದರೆ, ಕಳೆದ ಮೂರು ದಿನಗಳಲ್ಲಿ 13.8 ರಷ್ಟಿದೆ. ಆದರೆ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 21 ದಿನಗಳ ಸರಾಸರಿ ಅವಧಿಯಲ್ಲಿ ಡಬಲ್ ಆಗುತ್ತಿದ್ದು, ದೇಶದಲ್ಲಿ 26 ದಿನಗಳಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.