ಬೆಂಗಳೂರು: ಕೊರೊನಾದಿಂದ ದೂರ ಉಳಿಯಲು ಆಟೋ ಚಾಲಕ ಮಾಡಿಕೊಂಡಿರುವ ಕ್ರಮಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಈ ವಿಡಿಯೋವನ್ನು ಶೇರ್ ಮಾಡಿಕೊಂಡು, ಚಾಲಕನ ಪ್ಲಾನ್‍ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಜನರು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಮಾಸ್ಕ್ ಧರಿಸಬೇಕು. ಹಾಗೆ ಸಾನಿಟೈಸ್ ಬಳಕೆ ಮಾಡಲು ಸರ್ಕಾರ ಸಲಹೆ ನೀಡಿದೆ. ಈ ಎಲ್ಲ ನಿಯಮಗಳನ್ನು ಆಟೋ ಚಾಲಕ ಪಾಲನೆ ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ಹೆಸರು ತಿಳಿದು ಬಂದಿಲ್ಲ.
Advertisement
Corona Virus ka bilkul ricks nahi lene ka pic.twitter.com/I2uWJ82Fzm
— Autowaala (@Autowaala) June 15, 2020
Advertisement
ಆಟೋದ ಮುಂಭಾಗದಲ್ಲಿ ನೀರಿನ ಟ್ಯಾಂಕ್ ಅಳವಡಿಸಿದ್ದು, ಇದರ ಪೈಪ್ ಸಂಪರ್ಕವನ್ನು ಡ್ರೈವರ್ ಸೀಟ್ ಹಿಂಬದಿಯಲ್ಲಿ ಫಿಕ್ಸ್ ಮಾಡಿರೋ ಸಿಂಕ್ ಗೆ ಲಿಂಕ್ ಮಾಡಲಾಗಿದೆ. ಸಿಂಕ್ ಬಳಿ ಹ್ಯಾಂಡ್ ವಾಶ್ ಮತ್ತು ಸ್ಯಾನಿಟೈಸರ್ ಬಾಟಲ್ ಗಳನ್ನು ಇರಿಸಲಾಗಿದೆ. ಇಷ್ಟೆಲ್ಲ ವ್ಯವಸ್ಥೆಗಳನ್ನು ಚಾಲಕ ತನ್ನ ಆಟೋದಲ್ಲಿ ಮಾಡಿಕೊಂಡಿದ್ದಾರೆ. ಆಟೋವಾಲ್ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ನೆಟ್ಟಿಗರು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿ ರಿಟ್ವೀಟ್ ಮಾಡಿಕೊಳ್ಳುತ್ತಿದ್ದಾರೆ.
Advertisement
https://twitter.com/waterwithoutice/status/1274433370597056513