– ನಾಲ್ಕು ಮಹತ್ವದ ಘೋಷಣೆ ಮಾಡಿದ ಕೇಜ್ರಿವಾಲ್
– ಕೊರೊನಾದಿಂದ ಸಾವನ್ನಪ್ಪಿದವರ ಪ್ರತಿ ಕುಟುಂಬಕ್ಕೆ 50 ಸಾವಿರ
ನವದೆಹಲಿ: ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಿಸಿದ್ದು, ಇದರ ಜೊತೆಗೆ ಸಂಕಷ್ಟದಲ್ಲಿರುವ ಜನತೆಗೆ ನೆರವಾಗಲು ನಾಲ್ಕು ಮಹತ್ವದ ಘೋಷಣೆ ಮಾಡಿದ್ದಾರೆ.
ऐसे बच्चे जिन्होंने कोरोना की वजह से अपने माता पिता को खो दिया, ऐसे सभी बच्चे अपने आप को अकेला और बेसहारा ना समझें, मैं हर वक्त उनके साथ खड़ा हूँ।
उन्हें एकमुश्त मुआवज़े के अलावा 25 साल की उम्र तक ₹2,500 हर महीने हर बच्चे को दिए जाएंगे और उनकी शिक्षा मुफ़्त होगी pic.twitter.com/2UZo9aWFoO
— Arvind Kejriwal (@ArvindKejriwal) May 18, 2021
ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ 25 ವರ್ಷದವರೆಗೂ ಮಾಸಿಕ 2,500 ರೂ. ಮಾಶಾಸನ ನೀಡುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ ಉಚಿತ ಶಿಕ್ಷಣ ಹಾಗೂ ಉಚಿತವಾಗಿ ಹತ್ತು ಕೆ.ಜಿ. ಪಡಿತರ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಕೊರೊನಾಗೆ ಬಲಿಯಾದವರ ಪ್ರತಿ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ, ಕೊರೊನಾದಿಂದ ಪತಿ ಸತ್ತರೆ ಪತ್ನಿಗೆ ಪಿಂಚಣಿ, ಪತ್ನಿ ಸತ್ತರೆ ಪತಿಗೂ ಪಿಂಚಣಿ, ಅವಿವಾಹಿತ ವ್ಯಕ್ತಿ ಸತ್ತರೆ ಪೋಷಕರಿಗೆ ಪಿಂಚಣಿ ನೀಡುವುದಾಗಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
कोरोना की वजह से बहुत से परिवारों ने अपनों को खो दिया है। ऐसे कई परिवार हैं जहाँ से कमाने वाला सदस्य ही चला गया। कोरोना से हुई प्रत्येक मृत्यु पर परिजनों को 50 हज़ार रुपए मुआवज़ा और जिनके घर से कमाने वाला सदस्य गया है उन्हें हर महीने ढाई हज़ार रुपए पेंशन भी दी जाएगी। pic.twitter.com/lk95L0CFiU
— Arvind Kejriwal (@ArvindKejriwal) May 18, 2021
ನಮ್ಮ ರಾಜ್ಯದಲ್ಲಿ ಸಹ ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ರಕ್ಷಣೆಗೆ ಸರ್ಕಾರ ಧಾವಿಸಿದೆ. ಪ್ರತಿ ಜಿಲ್ಲೆಯಲ್ಲೂ ಸ್ವಯಂ ಸೇವಾ ಸಂಸ್ಥೆಗಳ ನೆರವಿನೊಂದಿಗೆ ದತ್ತು ಕೋವಿಡ್ ಕೇರ್ ಸ್ಥಾಪಿಸಲಾಗುವುದು. ಅನಾಥ ಮಕ್ಕಳನ್ನು ದತ್ತು ನಿಯಮಾವಳಿ ಪ್ರಕಾರ ದತ್ತು ನೀಡಲಾಗುವುದು. ಅಲ್ಲಿಯವರೆಗೂ ಮಕ್ಕಳ ಆರೈಕೆ, ಪೋಷಣೆ ಹೊಣೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವಹಿಸಿಕೊಳ್ಳಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕೋವಿಡ್ ಬಾಧಿತ ಮಕ್ಕಳಿಗಾಗಿ 0-6 ವರ್ಷ ವಯೋಮಾನದ ಮಕ್ಕಳಿಗಾಗಿ ಕ್ವಾರಂಟೈನ್ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.