ಶಿವಮೊಗ್ಗ: ತಾವು ನಂಬಿದ ದೈವವನ್ನು ಒಲಿಸಿಕೊಳ್ಳಲು ಭಕ್ತರು ಹಲವು ರೀತಿಯ ಮಾರ್ಗ ಅನುಸರಿಸುತ್ತಾರೆ. ಕೆಲವರು ನೂರಾರು ಕಿ.ಮೀ ನಡೆದು ಸಾಗಿ ತಾನು ನಂಬಿದ ದೇವರ ದರ್ಶನ ಮಾಡುತ್ತಾರೆ. ಇನ್ನು ಕೆಲವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. ಆದರೆ ಕೊರೊನಾದಿಂದಾಗಿ ಕಳೆದ ಮೂರು ತಿಂಗಳಿನಿಂದ ಮಂದಿರ ಮಸೀದಿಗಳು ಮುಚ್ಚಿರುವುದರಿಂದ ಭಕ್ತರು ದೇವರನ್ನು ಒಲಿಸಿಕೊಳ್ಳಲು ಬೇರೊಂದು ಮಾರ್ಗ ಕಂಡುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಹಣಗೆರೆ ಕಟ್ಟೆ ಸೌಹಾರ್ದ ಕೇಂದ್ರದಲ್ಲಿ ಹಿಂದೂ ದೇವಾಲಯ ಹಾಗೂ ಮುಸ್ಲಿಮರ ಮಸೀದಿ ಎರಡು ಒಟ್ಟೊಟ್ಟಿಗೆ ಇದೆ. ಈಗಾಗಿ ಈ ಸ್ಥಳ ಭಾವೈಕ್ಯತೆಯ ಕೇಂದ್ರವಾಗಿದೆ. ಇಲ್ಲಿಗೆ ಪ್ರತಿ ಅಮವಾಸ್ಯೆ ಹಾಗೂ ಹುಣ್ಣಿಮೆಯ ದಿನದಂದು ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ಆದರೆ ಕೊರೊನಾದಿಂದಾಗಿ ಕಳೆದ ಮೂರು ತಿಂಗಳಿನಿಂದ ಇದಕ್ಕೆ ಬ್ರೇಕ್ ಬಿದ್ದಿದೆ. ದೇವಾಲಯ ಹಾಗೂ ದರ್ಗಾ ಎರಡು ಮುಚ್ಚಲ್ಪಟ್ಟಿವೆ.
Advertisement
Advertisement
ಹೀಗಾಗಿಯೇ ಹಣಗೆರೆ ಕಟ್ಟೆ ಈ ದೇವಾಲಯ ಹಾಗೂ ದರ್ಗಾಕ್ಕೆ ಹೋಗುತ್ತಿದ್ದ ಭಕ್ತರು ಹಣಗೆರೆ ಕಟ್ಟೆ ಎಂಬ ನಾಮಫಲಕ ಇರುವ ಮೈಲಿಗಲ್ಲಿಗೆ ಅರಿಶಿನ ಕುಂಕುಮ, ಹೂವು ಹಣ್ಣು ಕಾಯಿ ಇಟ್ಟು ಪೂಜೆ ಸಲ್ಲಿಸುತ್ತಿದ್ದಾರೆ. ಭಕ್ತಿಯ ಪರಾಕಾಷ್ಠೆಯಿಂದ ಮೈಲಿಗೆ ನಮಿಸುತ್ತಿದ್ದಾರೆ. ಮೈಲಿಗಲ್ಲಿಗೆ ಪೂಜೆ ಸಲ್ಲಿಸುತ್ತಿರುವುದನ್ನು ನೋಡಿದರೆ ಭಕ್ತರ ಮೂಢನಂಬಿಕೆ ಎಲ್ಲಿಗೆ ಹೋಗಿ ನಿಲ್ಲುತ್ತೋ ಎಂಬ ಪ್ರಶ್ನೆ ಮೂಡಿದೆ.