ಕೊರೊನಾದಿಂದ ಏಕಕಾಲಕ್ಕೆ ಅಡ್ಮಿಟ್ – ಕೋವಿಡ್ ಗೆದ್ದ 99ರ ತಂದೆ, 67ರ ಮಗ

Public TV
1 Min Read
bly 2

ಬಳ್ಳಾರಿ: ತಂದೆ ಮತ್ತು ಮಗ ಇಬ್ಬರಿಗೂ ಒಂದೇ ದಿನ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಇಬ್ಬರೂ ಒಂದೇ ದಿನ ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುವ ಅಪರೂಪದ ಕೊರೊನಾ ಪ್ರಕರಣ ಬಳ್ಳಾರಿಯಲ್ಲಿ ನಡೆದಿದೆ.

coronavirus

ಸಿರುಗುಪ್ಪ ತಾಲೂಕಿನ 99 ವರ್ಷದ ಅಚ್ಯುತ್ ರಾವ್ ಹಾಗೂ 67 ವರ್ಷದ ಮಗ ರಂಗಾರಾವ್ ಇಬ್ಬರಿಗೂ ಸೆಪ್ಟೆಂಬರ್ 1 ರಂದು ಸೋಂಕು ದೃಢಪಟ್ಟಿತ್ತು. ಅಂದಿನಿಂದ ಬಳ್ಳಾರಿಯ ಟ್ರಾಮಕೇರ್ ಸೆಂಟರಿನಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು.

ಇದೀಗ ತಂದೆ-ಮಗ ಇಬ್ಬರೂ ಏಕಕಾಲದಲ್ಲಿ ಒಂದೇ ದಿನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಚಪ್ಪಾಳೆಗಳ ಮೂಲಕ ತಂದೆ ಮತ್ತು ಮಗನನ್ನು ಅಭಿನಂದಿಸಿ ಬೀಳ್ಕೊಟ್ಟರು. ಆರೋಗ್ಯ ಸುಧಾರಣೆಗೆ ಕಾರಣರಾದ ವೈದ್ಯ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ತಂದೆ-ಮಗ ಧನ್ಯವಾದ ಸಲ್ಲಿಸಿದರು.

byl a

ಗುರುವಾರ ಸಹ ಕೊರೊನಾ ವೈರಸ್ ರಾಜ್ಯದಲ್ಲಿ 9 ಸಾವಿರದ ಗಡಿ ದಾಡಿದೆ. ರಾಜ್ಯದಲ್ಲಿ 9,217 ಮಂದಿಗೆ ಸೋಂಕು ತಗುಲಿದ್ರೆ, 7,021 ರೋಗಿಗಳು ಗುಣಮುಖರಾಗಿಗೆ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾಗೆ 129 ಮಂದಿಗೆ ಪ್ರಾಣ ಕಳೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 6,937ಕ್ಕೆ ಏರಿಕೆಯಾಗಿದೆ.

vlcsnap 2020 09 11 09h52m27s233

Share This Article
Leave a Comment

Leave a Reply

Your email address will not be published. Required fields are marked *