ನವದೆಹಲಿ: ಕೊರೊನಾ ಮಹಾಮಾರಿ ದೇಶದಲ್ಲಿ ಅತಿ ವೇಗವಾಗಿ ಹರಡುತ್ತಿದೆ ಮತ್ತು ಒಬ್ಬ ವ್ಯಕ್ತಿ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಬಳಿಕ ಮತ್ತೊಮ್ಮೆ ಸೋಂಕಿಗೆ ಒಳಗಾಗುವ ಸಾಧ್ಯತೆಗಳಿದೆ. ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾವನ್ನು ತಡೆಗಟ್ಟಬಹುದು. ಆದರೆ ಎಲ್ಲಾ ಸಂದರ್ಭದಲ್ಲಿಯೂ ಶೇ.100ರಷ್ಟು ಸುರಕ್ಷಿತವಾಗಿರುತ್ತೇವೆ ಎಂದು ಖಾತರಿಪಡಿಸಲಾಗುವುದಿಲ್ಲ ಎಂದು ತಜ್ಞರೆ ತಿಳಿಸಿದ್ದಾರೆ.
ಹೀಗಿರುವಾಗ ರೋಗದಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ರೋಗದಿಂದ ಚೇತರಿಸಿಕೊಂಡವರಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಇತ್ತೀಚೆಗೆ ಕೋವಿಡ್-19ನಿಂದ ಚೇತರಿಸಿಕೊಂಡ ವ್ಯಕ್ತಿಗಳು ತಕ್ಷಣ ತಮ್ಮ ಹಲ್ಲನ್ನು ಉಜ್ಜುವ ಬ್ರಷ್‍ನನ್ನು ಬದಲಾಯಿಸಿಬೇಕು ಎಂದು ದಂತ ವೈದ್ಯರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇದರಿಂದ ಮತ್ತೆ ಸೋಂಕಿಗೆ ಒಳಗಾಗುವುದನ್ನು ಮತ್ತು ಮನೆಯಲ್ಲಿ ಒಂದೇ ವಾಶ್ ರೂಂ ಬಳಸುವ ಇತರರನ್ನು ರಕ್ಷಿಸಬಹುದು ಎಂದು ಹೇಳಿದ್ದಾರೆ.
ನೀವು ಅಥವಾ ನಿಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರು ಯಾರಾದರೂ ಕೋವಿಡ್‍ಗೆ ಒಳಗಾಗಿ ಅದರಿಂದ ಚೇತರಿಸಿಕೊಂಡ ನಂತರ, ದಯವಿಟ್ಟು ನಿಮ್ಮ ಟೂತ್ ಬ್ರಷ್, ಟಂಗ್ ಕ್ಲೀನರ್ ಇತ್ಯಾದಿಗಳನ್ನು ಬದಲಾಯಿಸುವುದು ಉತ್ತಮ. ಇವುಗಳಲ್ಲಿ ವೈರಸ್ ಇರಬಹುದು. ಹೀಗಾಗಿ ಇವುಗಳನ್ನು ತ್ಯಜಿಸುವುದು ಉತ್ತಮ ಎಂದು ನವದೆಹಲಿಯ ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜಿನ ಡೆಂಟಲ್ ಸರ್ಜರಿ ಎಚ್‍ಒಡಿ ಆಗಿರುವ ಡಾ. ಪ್ರವೀಶ್ ಮೆಹ್ರಾ ತಿಳಿದ್ದಾರೆ.