ದಾವಣಗೆರೆ: ತನಗೆ ಕೋವಿಡ್ ಬಂದಿದೆ ಎಂದು ಹೆದರಿ ಯುವಕನೊಬ್ಬ ಐಸೋಲೇಷನ್ ಇದ್ದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವರಾಜ್ (30) ಆತ್ಮಹತ್ಯೆ ಮಾಡಿಕೊಂಡ ಸೋಂಕಿತ ಎಂದು ಹೇಳಲಾಗುತ್ತಿದ್ದು, ಎರಡು ದಿನಗಳ ಹಿಂದೆ ಬಸವರಾಜ್ ಅನಾರೋಗ್ಯದಿಂದ ಬಳಲುತ್ತಿದ್ದ. ಈ ಹಿನ್ನೆಲೆ ಕೋವಿಡ್ ಟೆಸ್ಟ್ ಮಾಡಿಸಿದ್ದು, ಬುಧವಾರ ಬಂದ ಕೋವಿಡ್ ರಿಪೋರ್ಟ್ ನಲ್ಲಿ ಪಾಸಿಟಿವ್ ಎಂದು ದೃಢಪಟ್ಟಿದೆ.
ಇದರಿಂದ ಆತಂಕಕ್ಕೆ ಒಳಗಾಗಿದ್ದ ಬಸವರಾಜ್ ಮನೆಯಲ್ಲಿ ಪ್ರತ್ಯೇಕ ರೂಂ ನಲ್ಲಿ ಐಸುಲೇಷನ್ ಆಗಿದ್ದ. ತಂದೆ-ತಾಯಿ ಬೇರೆ ರೂಂ ನಲ್ಲಿ ಇದ್ದರೆ ಮತ್ತೊಂದು ರೂಂ ನಲ್ಲಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಬಸವರಾಜ್ ನನ್ನು ಇರಿಸಿದ್ದರು. ಕೊರೊನಾ ಭಯದಿಂದ ತಾನು ಇದ್ದ ರೂಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ಒಳಪಡಿಸಲಾಗಿದೆ.