– ರೌಡಕುಂದ ಮಠದ ಶ್ರೀಗಳು ಸಾವು
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದ ಸಂಸ್ಥಾನಮಠದ 13ನೇ ಪೀಠಾಧಿಪತಿ ಮರಿಸಿದ್ದಲಿಂಗಸ್ವಾಮೀಜಿ ಸಾವನ್ನಪ್ಪಿದ್ದಾರೆ.
44 ವರ್ಷದ ಸ್ವಾಮೀಜಿ ಡೆಂಗ್ಯೂ ಜ್ವರ ಹಾಗೂ ಉಸಿರಾಟ ತೊಂದರೆ ಹಿನ್ನೆಲೆ ಮೂರು ದಿನಗಳ ಹಿಂದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಸಾವಿನ ಬಳಿಕ ಕೋವಿಡ್-19 ವರದಿ ಬಂದಿದ್ದು, ಕೊರೊನಾ ಪಾಸಿಟಿವ್ ಸಹ ದೃಢಪಟ್ಟಿದೆ.
ಕೋವಿಡ್-19 ನಿಯಮಾನುಸಾರ ರೌಡಕುಂದ ಗ್ರಾಮದಲ್ಲಿ ಇಂದು ಸಂಜೆ ಅಂತ್ಯಸಂಸ್ಕಾರ ನಡೆಯಲಿದೆ. ಅಂತ್ಯ ಸಂಸ್ಕಾರದಲ್ಲಿ ಕೆಲವೇ ಭಕ್ತರು ಭಾಗವಹಿಸಲು ಅವಕಾಶ ನೀಡಲಾಗಿದೆ. ಸ್ವಾಮೀಜಿ ಸಾವನ್ನಪ್ಪಿದ ಹಿನ್ನೆಲೆ ಗ್ರಾಮದಲ್ಲಿ ಜನ ಸೇರದಂತೆ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಅಪಾರ ಭಕ್ತ ಸಮೂಹ ಹೊಂದಿರುವ ಸ್ವಾಮೀಜಿ ಅಗಲಿಕೆಗೆ ಭಕ್ತರು, ವಿವಿಧ ಮಠಗಳ ಶ್ರೀಗಳು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.