– ಪಿಎಚ್‍ಡಿ ವಿದ್ಯಾರ್ಥಿಗಳೊಂದಿಗೆ ಸಂಶೋಧನೆ
ಉಡುಪಿ: ವಿಶ್ವಾದ್ಯಂತ ಮಾರಣ ಹೋಮವನ್ನೇ ನಡೆಸುತ್ತಿರುವ ಮಹಾಮಾರಿ ಕೊರೊನಾ ತೊಲಗಿಸಲು ವಿಶ್ವದ ಬಹುತೇಕ ರಾಷ್ಟ್ರಗಳ ವಿಜ್ಞಾನಿಗಳ ತಂಡ ಹರಸಾಹಸಪಡುತ್ತಿದೆ. ಇದೆಲ್ಲದ ಮಧ್ಯೆ ಉಡುಪಿ ಮೂಲದ ಕೆನಡಾ ಕನ್ನಡಿಗ ವೈದ್ಯರಿಗೆ ಕೊರೊನಾ ಔಷಧಿ ಸಂಶೋಧನೆಯಲ್ಲಿ ಆರಂಭಿಕ ಯಶಸ್ಸು ಸಿಕ್ಕಿದೆ.
Advertisement
ಕೆನಡಾದಲ್ಲಿ ಫಾರ್ಮಸಿ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಉಡುಪಿಯ ಪೆರಂಪಳ್ಳಿಯ ನೆಕ್ಕಾರ್ ನಿವಾಸಿ ಡಾ.ಪ್ರವೀಣ್ ರಾವ್ ಈ ಸಂಶೋಧನೆ ನಡೆಸಿದ್ದಾರೆ. ಮಹಾಮಾರಿ ಕರೊನಾ ತೊಲಗಿಸಲು ಟೈಪ್ 2 ಡಯಾಬಿಟೀಸ್‍ಗೆ ನೀಡುವ ಔಷಧಿ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಇದರಲ್ಲಿ ಅವರಿಗೆ ಮೊದಲ ಯಶಸ್ಸು ಕೂಡಾ ಸಿಕ್ಕಿದೆ.
Advertisement
ಡಿಪಿಪಿ-4 ಇನ್ಹಿಬೀಟರ್ ಇನ್ ಟೈಪ್ 2 ಡಯಾಬಿಟೀಸ್ ಮೇಲೆ 6 ಪಿ.ಎಚ್.ಡಿ ವಿದ್ಯಾರ್ಥಿಗಳನ್ನೊಳಗೊಂಡ ತಂಡದ ಜೊತೆ ಡಾ.ಪ್ರವೀಣ್ ರಾವ್ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕೆನಡಾದ ಪ್ರತಿಷ್ಠಿತ ವಾಟರ್ ಲೂ ವಿಶ್ವವಿದ್ಯಾಲಯದಲ್ಲಿ ಮಹತ್ವದ ಸಂಶೋಧನೆ ನಡೆಯುತ್ತಿದ್ದು, ಹೊಸ ಔಷಧ ಕಂಡು ಹಿಡಿಯಲು ಹತ್ತರಿಂದ ಹದಿನೈದು ವರ್ಷ ತಗುಲುತ್ತದೆ ಎಂದು ಅಂದಾಜಿಸಲಾಗಿದೆ.
Advertisement
Advertisement
ಈ ಔಷಧ ಕಂಡು ಹಿಡಿಯಲು ನೂರು ಕೋಟಿ ಡಾಲರ್ ಗೂ ಅಧಿಕ ಖರ್ಚಾಗುತ್ತದೆ. ಈಗಾಗಲೇ ನಾವು ಕಂಡುಹಿಡಿದಿರುವ ಐದು ಸಾವಿರ ಔಷಧ ಫಾರ್ಮುಲಾ ಇದೆ. ಈ ಫಾರ್ಮುಲಾಗಳ ಸಂರಚನೆಯನ್ನು ಬಳಸಿಕೊಂಡು ವೈರಸ್ ವಿರುದ್ಧ ಹೋರಾಡಬೇಕು. ಟೈಪ್ 2 ಡಯಾಬಿಟೀಸ್ ಮದ್ದಿನಲ್ಲಿ ಕರೊನಾದ ವ್ಯಾಪಕ ಹರಡುವಿಕೆಯನ್ನು ತಡೆಯುವ ಶಕ್ತಿ ಇದೆ. ಇದು ಈಗಾಗಲೇ ವೈದ್ಯಕೀಯ ಪ್ರಯೋಗಗಳಿಂದ ದೃಢಪಟ್ಟಿದೆ. ಇದನ್ನು ಕರೊನಾ ಸೋಂಕಿತರ ಮೇಲೆ ಪ್ರಯೋಗ ಮಾಡಿ ನೋಡುವುದು ಬಾಕಿ ಇದೆ ಎಂದು ಡಾ.ಪ್ರವೀಣ್ ರಾವ್ ಹೇಳಿದ್ದಾರೆ.