ಕೊಡಗಿನಲ್ಲಿ ಅಗತ್ಯ ವಸ್ತುಗಳಿಗಾಗಿ ಮುಗಿಬಿದ್ದ ಜನ

Public TV
1 Min Read
FotoJet 4 5

ಮಡಿಕೇರಿ: ಕೊಡಗಿನಲ್ಲಿ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 6 ರಿಂದ 12 ಗಂಟೆಯವರೆಗೆ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದಿದ್ದರು.

FotoJet 1 6

ನಗರದ ಚೌಕಿ, ಇಂದಿರಾಗಾಂಧಿ ವೃತ್ತ ಕಾಲೇಜು ಜನರಲ್ ತಿಮ್ಮಯ್ಯ ರಸ್ತೆಗಳಲ್ಲಿ ಬೆಳಿಗ್ಗೆಯಿಂದಲೂ ಟ್ರಾಫಿಕ್ ಜಾಮ್ ಕಂಡು ಬಂದಿತು. ಅಷ್ಟೇ ಅಲ್ಲದೆ ಅಂಗಡಿಗಳಲ್ಲಿ ಸಾಲುಗಟ್ಟಿ ಜನರು ಅಗತ್ಯ ವಸ್ತುಗಳ ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಬಂದಿದ್ದರು. ಕೆಲವೆಡೆ ಸಾಮಾಜಿಕ ಅಂತರವಿಲ್ಲದೆ ನುಗ್ಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದಿತು. ಇನ್ನೆರಡು ದಿನ ಏನು ಕೊಳ್ಳಲಾಗುವುದಿಲ್ಲ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿದ್ದರು.

FotoJet 3 5

ಇಂದಿನಿಂದ ಕೊಡಗು ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆ ಹನ್ನೆರಡು ಗಂಟೆಗೂ ಮುನ್ನವೇ ಅಂಗಡಿ ಮುಗ್ಗಟ್ಟುಗಳನ್ನು ವರ್ತಕರು ಬಂದ್ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಸಹಕಾರ ನೀಡಿದರು. ಹನ್ನೆರಡು ಗಂಟೆಗೂ ಮುನ್ನವೇ ನಗರದ ಪೊಲೀಸರು ಲಾಠಿ ಹಿಡಿದು ಫೀಲ್ಡಿಗಿಳಿದರು. ಮಡಿಕೇರಿ ಸರ್ಕಲ್ ಇನ್ಸ್‍ಪೆಕ್ಟರ್ ಅನೂಪ್ ಮಾದಪ್ಪ ಮತ್ತು ಟೀಂ ಕಾರ್ಯಚರಣೆ ನಡೆಸುತ್ತಾ, ನಗರದ ಹಲವೆಡೆ ಅನಗತ್ಯ ಓಡಾಟ ನಡೆಸುತ್ತಿದರಿಗೆ ಎಚ್ಚರಿಕೆ ನೀಡಿದರು. ಇನ್ನೂ ಮೂರು ದಿನಗಳ ಕಾಲ ಸ್ಥಬ್ಧವಾಗಲಿರುವ ಕೊಡಗು ಇನ್ನು ಶುಕ್ರವಾರದವರೆಗೆ ಬಂದ್ ಆಗಲಿದೆ.

FotoJet 2 6

ಮಡಿಕೇರಿ ನಗರಸಭೆ ನೂತನ ಸದಸ್ಯ ಮುಸ್ತಫಾ ಅವರಿಂದ ಮಡಿಕೇರಿ ನಗರದ ಅನೇಕ ವಾಡ್9ಗಳಿಲ್ಲಿರುವ ಅಂಗಡಿ ಮುಗ್ಗಟ್ಟುಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ಮಡಿಕೇರಿ ನಗರಸಭೆ ಜೆಡಿಎಸ್ ನೂತನ ಸದಸ್ಯ ಮುಸ್ತಫಾ ಹಾಗೂ ಅವರ ತಂಡದ ಸದಸ್ಯರು ನಗರದ ಮಾರ್ಕೆಟ್ ರೋಡ್, ಕಾಲೇಜು ರಸ್ತೆ ಸೇರಿದಂತೆ ಎಲ್ಲೆಡೆ ಸ್ಯಾನಿಟೈಸರ್ ಸಿಂಪಡಣೆ ಮಾಡಿದರು. ಬೆಳಿಗ್ಗೆಯಿಂದ ಜನರು ಓಡಾಡಿದ್ದ ಹಿನ್ನೆಲೆ ಎಲ್ಲೆಡೆ ಸ್ಯಾನಿಟೈಸರ್ ಸಿಂಪರಣೆ ಮಾಡಿ ಸಾರ್ವಜನಿಕರ ಮೆಚ್ಚುಗೆ ಪಾತ್ರರದರು.

Share This Article
Leave a Comment

Leave a Reply

Your email address will not be published. Required fields are marked *