ಕೈ ತಪ್ಪಿದ ಸಚಿವ ಸ್ಥಾನ – ರೇಣುಕಾಚಾರ್ಯ ಕಣ್ಣೀರು

Public TV
2 Min Read
RENUKA 1 1

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಇದರಲ್ಲಿ ಶಾಸಕ ರೇಣುಕಾಚಾರ್ಯ ಅವರ ಹೆಸರಲ್ಲಿ. ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಶಾಸಕರು ಗದ್ಗದಿತರಾಗಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಡಿಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ. ಲಾಬಿ ಮಾಡಿಲ್ಲ, ಲಾಬಿ ಮಾಡಿದ್ರೆ ನಾನೂ ಇಂದು ಮಂತ್ರಿಯಾಗುತ್ತಿದ್ದೆ. ಯಾರು ಸಮರ್ಥರಿದ್ದಾರೆ ಅವರಿಗೆ ಕೊಟ್ಟಿರಬಹುದು. ಹೀಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಒಟ್ಟಾರೆಯಾಗಿ ಮುಖ್ಯಮಂತ್ರಿಗಳು ಹಾಗೂ ನೂತನ ಸಚಿವರಿಗೆ ಒಳ್ಳೆಯದಾಗಲಿ. ಅವರಿಗೆ ನನ್ನ ಕಡೆಯಿಂದ ಶುವನ್ನು ಕೋರುತ್ತೇನೆ ಎನ್ನುತ್ತಲೇ ಭಾವುಕರಾಗಿದ್ದಾರೆ.

bsy 5

ಈ ಹಿಂದೆ ಯಡಿಯೂರಪ್ಪರನ್ನು ಭೇಟಿಯಾದ್ರಿ. ಒಂದು ಹಂತದಲ್ಲಿ ನಾಯಕತ್ವ ಬದಲಾವಣೆಯಾಗಬಾರದು ಎಂದು ಪಟ್ಟು ಹಿಡಿದು ಸಹಿ ಸಂಗ್ರಹ ಕೂಡ ಮಾಡಿದ್ರಿ. ಆದರೆ ಇಂದು ಸಚಿವ ಸ್ಥಾನ ಸಿಕ್ಕಿಲ್ಲ. ಇದು ಈಗಾಗಲೇ ಮುಗಿದ ಅಧ್ಯಾಯ. ಹಳೆಯ ಕಥೆಯನ್ನು ಮತ್ತೆ ನೆನಪು ಮಾಡಿಕೊಳ್ಳುವುದು ಬೇಡ. ಕಥೆ ಕಥೆಯಾಗಿಯೇ ಉಳಿಯಲಿ. ನಾನು ಈವಾಗ ಏನು ಮಾತಾಡಿದ್ರೂ, ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಅಸಮಾಧಾನದಿಂದ ಮಾತಾಡಿದ್ದಾರೆ ಎಂದು ಆಗುತ್ತದೆ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಇಚ್ಛೆ ಪಡಲ್ಲ ಎಂದರು.

RENUKA 1

ಕಳೆದ 8 ದಿನಗಳ ಹಿಂದೆ ಬಸವರಾಜ್ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾರೆ. ಇಮದು 29 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಮಾಡುತ್ತಿದ್ದಾರೆ. ಬಹುಶಃ ಅವರೆಲ್ಲ ಸಮರ್ಥರಿದಾರೆ. ಹಾಗಾಗಿ ಕೊಟ್ಟಿರಬಹುದು. ಅಧಿಕಾರಕ್ಕೋಸ್ಕರ ಅಂಟಿಕೊಳ್ಳುವ ವ್ಯಕ್ತಿ ನಾನಲ್ಲ. ನಾನು ಕೆಲಸ ಮಾಡಿದ್ದೀನಿ. ಅಧಿಕಾರ ನನ್ನ ಹಿಂದೆ ಬರಬೇಕು. ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನು ಲಾಬಿ ಮಾಡಿಲ್ಲ. ಬೆಂಗಳೂರು, ಡೆಲ್ಲಿಯಲ್ಲಿ ಕುಳಿತುಕೊಂಡು ಲಾಬಿ ಮಾಡಬಹುದಿತ್ತು. ಆದರೆ ನಾನು ಕ್ಷೇತ್ರದ ಜನರ ಮಧ್ಯೆ ಇದ್ದೆ. ಕೆರೆ ಕಟ್ಟೆ ಒಡೆದು ಹೋಗಿ ಬೆಳೆ ನಾಶ ಆಗಿತ್ತು. ಅಲ್ಲಿ ಹೋಗಿ ಜಂಟಿ ಸಮೀಕ್ಷೆ ಮಾಡಿ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಬಂದಿದ್ದೇನೆ ಎಂದರು.

DVG 2

ದಾವಣಗೆರೆ ಜಿಲ್ಲೆಗೆ ಬಹಳ ಅನ್ಯಾಯ ಆಗಿದೆ. ಶೈಕ್ಷಣಿಕವಾಗಿ, ವಾಣಿಜ್ಯ ಹಾಗೂ ಕೃಷಿಗೆ ಪ್ರಾಧಾನ್ಯತೆ ಇರುವ ಜಿಲ್ಲೆಯಾಗಿದೆ. ಹೀಗಾಗಿ ಜಿಲ್ಲೆಗೆ ಬಹಳ ಅನ್ಯಾಯ ಆಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೆ. ಅದನ್ನು ನೇರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಯಡಿಯೂರಪ್ಪ, ಅರುಣ್ ಸಿಂಗ್ ಗೂ ಹೇಳಿದ್ದೇವೆ. ಆದರೆ ಅಧಿಕಾರಕ್ಕಾಗಿ ಲಾಬಿ ಮಾಡಿಲ್ಲ ಅಂದ್ರು.

Share This Article
Leave a Comment

Leave a Reply

Your email address will not be published. Required fields are marked *