ಕಲಬುರಗಿ: ಜಿಲ್ಲೆಯಿಂದ ಒಂದೊಂದೇ ಪ್ರಮುಖ ಹಾಗೂ ಪ್ರತಿಷ್ಠಿತ ಯೋಜನೆಗಳು ಕೈ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಬಿಜೆಪಿ ಸರ್ಕಾರಕ್ಕೆ ಹಾಗೂ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
Advertisement
ರೈಲ್ವೆ ಡಿವಿಷನ್, ಏಮ್ಸ್, ಟೆಕ್ಸ್ ಟೈಲ್ಸ್ ಪಾರ್ಕ್, ಆಹಾರ ಪ್ರಯೋಗಾಲಯ ಹಾಗೂ ಇಂಧನ ಪ್ರಾದೇಶಿಕ ಕಚೇರಿ ಹೋಗಿವೆ. ಇದೀಗ ದಶಕಗಳ ಕಾಲ ಇತಿಹಾಸ ಹೊಂದಿರುವ ದೂರದರ್ಶನ ಕೇಂದ್ರವನ್ನೂ ಕೂಡಾ ಕಲಬುರಗಿಯಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ನಡೆಯ ವಿರುದ್ಧ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ಖಾಸಗಿ ತೆಕ್ಕೆಗೆ – 130 ಕೋಟಿ ರೂ. ನಿರೀಕ್ಷೆ
Advertisement
Advertisement
ರಾಜ್ಯ ಮತ್ತು ಜಿಲ್ಲೆಯಲ್ಲಿ ಇಷ್ಟೆಲ್ಲ ಆಗುತ್ತಿರುವುದು ಯಾರ ಸೋಂಬೇರಿತನದಿಂದ? ಜಿಲ್ಲೆಯು ಜನರದ್ದಾ? ಅಥವಾ ಬಿಜೆಪಿಗರದ್ದಾ? ಎಂದು ಪ್ರಶ್ನಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರ “ಕಲಬುರಗಿ ಜಿಲ್ಲೆಯ ಜನರು ಸೋಂಬೇರಿಗಳು” ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 6 ಲಕ್ಷ ಕೋಟಿ ಸಂಗ್ರಹ ಗುರಿ – ಖಾಸಗಿಯವರಿಗೆ ಸಿಗಲಿದೆ ರೈಲು, ರಸ್ತೆ, ಗಣಿ
Advertisement