– ಇಂದು ಪ್ರವಾಸೋದ್ಯಮ, ಸೇವಾವಲಯಕ್ಕೆ ನೆರವು ನೀಡುವ ಸಾಧ್ಯತೆ
ನವದೆಹಲಿ: ಕೊರೊನಾ ವೈರಸ್‍ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಮಂದಿಗೆ ಆರ್ಥಿಕತೆ ಪುನಶ್ಚೇತನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕನೇ ಹಂತದಲ್ಲಿ ಪ್ಯಾಕೇಜ್ ಹಂಚಿಕೆ ಮಾಡಲಿದ್ದಾರೆ.
Finance Minister Nirmala Sitharaman will address a press conference today at 4 PM. #EconomicPackage (file pic) pic.twitter.com/OLW8dAEpwI
— ANI (@ANI) May 16, 2020
Advertisement
ಸಂಜೆ 4 ಗಂಟೆಗೆ ಈಗಾಗಲೇ ಸುದ್ದಿಗೋಷ್ಠಿಗೆ ಸಮಯ ನಿಗಧಿ ಮಾಡಿದ್ದು, ಇಂದು ಸುಮಾರು 2 ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇಂದು ದೇಶದ ಪ್ರವಾಸೋದ್ಯಮ, ಸೇವಾವಲಯ ಕೇಂದ್ರಿಕರಿಸಿ ಪ್ಯಾಕೇಜ್ ಘೋಷಣೆ ಸಾಧ್ಯತೆ ಇದೆ ಎನ್ನಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಹೋಂ ಸ್ಟೇ, ಲಾಡ್ಜ್, ಅತಿಥಿ ಗೃಹಗಳು ಸೇರಿಸಂತೆ ಆತಿಥ್ಯ ವಲಯ, ಆಸ್ಪತ್ರೆಗಳ ಅಭಿವೃದ್ಧಿ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಘೋಷಣೆ ಆಗಲಿದೆ.
Advertisement
Advertisement
ಸಾರಿಗೆ ವ್ಯವಸ್ಥೆ ವಲಯದಡಿ ವಿಮಾನಯಾನ, ಖಾಸಗಿ ಸಾರಿಗೆ ಸಂಸ್ಥೆಗಳಿಗೆ ನೆರವು, ಚಿಲ್ಲರೆ ಮಾರುಕಟ್ಟೆ, ಶಿಕ್ಷಣ, ಸಿನಿಮಾದಂತಹ ಮನರಂಜನಾ ವಲಯಕ್ಕೂ ರಿಲೀಫ್ ಸಾಧ್ಯತೆ ಇದೆ. ಶುಕ್ರವಾರ ಸುಮಾರು 1.5 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿರುವ ಹಣಕಾಸು ಸಚಿವಲಾಯ, ಇದಕ್ಕೂ ಮುನ್ನ ಕೇಂದ್ರ ಸರ್ಕಾರದ ಹಿಂದಿನ 1.75 ಲಕ್ಷ ಕೋಟಿ ಹಾಗೂ ಆರ್‌ಬಿಐ ಘೋಷಿಸಿದ್ದ ಆರ್ಥಿಕ ನೆರವುಗಳು ಒಳಗೊಂಡು 16.5 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಘೋಷಣೆ ಮಾಡಿತ್ತು.