ಬೆಳಗಾವಿ: ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹಾಗೂ ಶಾಸಕ ಗಣೇಶ್ ಹುಕ್ಕೇರಿಯವರು ಇಂದು ಮೊದಲ ಹಂತದಲ್ಲಿ ಚಿಕ್ಕೋಡಿ ಕೆ.ಎಲ್.ಇ ಆಸ್ಪತ್ರೆಯಿಂದ ಪ್ರತಿ ಡೋಸ್ ಗೆ ರೂ.780 ರಂತೆ 2 ಸಾವಿರ ಲಸಿಕೆ ಖರಿದಿ ಮಾಡಿ ಚಿಕ್ಕೋಡಿ – ಸದಲಗಾ ಕ್ಷೇತ್ರದ ಯುವಕರಿಗೆ ಉಚಿತವಾಗಿ ಹಂಚಿದರು.
ಈ ವೇಳೆ ಶಾಸಕ ಗಣೇಶ್ ಹುಕ್ಕೇರಿ ಮಾತನಾಡಿ, ಸರ್ಕಾರ ಒಂದು ಲಸಿಕೆಗೆ ರೂ.780 ದರ ನಿಗಧಿ ಮಾಡಿ 18 ವರ್ಷಕ್ಕೂ ಮೆಲ್ಪಟ್ಟವರಿಗೆ ವ್ಯಾಕ್ಸಿನ್ ನಿಡುತ್ತಿದೆ. ಲಾಕಡೌನ್ ಹಾಗೂ ಕೊರೊನಾ ಮಹಾಮಾರಿಯಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ, ಪ್ರತಿ ಡೋಸ್ ಗೆ ರೂ.780 ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳುವುದು ಬಹಳಷ್ಟು ಕಷ್ಟದ ವಿಷಯ ಆಗಿದೆ, ಇದನ್ನು ಮನಗಂಡು ಚಿಕ್ಕೋಡಿ-ಸದಲಗಾ ಕ್ಷೇತ್ರದ ಯುವಕರನ್ನು ಕೊರೊನಾ ಮಹಾಮಾರಿಯಿಂದ ರಕ್ಷಿಸಲು, ಕೆ.ಎಲ್‍ಇ ಆಸ್ಪತ್ರೆಯಲ್ಲಿ ಇಂದು ಲಭ್ಯವಿರುವ 2 ಸಾವಿರ ಲಸಿಕೆಯನ್ನು ನಮ್ಮ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ಖರೀದಿ ಮಾಡಿ, ನನ್ನ ಕ್ಷೇತ್ರದ ಯುವಕರಿಗೆ ಉಚಿತವಾಗಿ ಹಂಚುತ್ತಿದ್ದೆನೆ ಎಂದು ತಿಳಿಸಿದರು.
Advertisement
Advertisement
ಮೊದಲ ಹಂತದಲ್ಲಿ ಒಟ್ಟು ಎರಡು ಸಾವಿರ ಲಸಿಕೆ ಖರಿದಿ ಮಾಡಿದ್ದೂ, ಕ್ಷೇತ್ರದ ಪ್ರತಿ ಪಂಚಾಯತಿಗೆ 100 ಲಸಿಕೆ ನೀಡಿದ್ದೆವೆ. ಹೀಗೆ ಹಂತ ಹಂತವಾಗಿ ಕೆ.ಎಲ್.ಇ ಆಸ್ಪತ್ರೆಯಲ್ಲಿನ ಲಸಿಕೆಯ ಲಭ್ಯತೆಯ ಮೇರೆಗೆ, ವ್ಯಾಕ್ಸಿನ್ ಖರೀದಿ ಮಾಡಿ ಕ್ಷೇತ್ರದ ಪ್ರತಿಯೊಬ್ಬ ಯುವಕನಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಶಾಸಕ ಹುಕ್ಕೇರಿ ತಿಳಿಸಿದರು.
Advertisement
ಈ ವೇಳೆ ಕೆ.ಎಲ್.ಇ ಆಸ್ಪತ್ರೆಯ ವೈದ್ಯರು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯರ್ತರು ಉಪಸ್ಥಿತರಿದ್ದರು.
Advertisement