– ನಾನು ರೈತನ ಮಗ
ಹಾವೇರಿ: ಕೃಷಿ ಇಲಾಖೆ ಯಾವತ್ತೂ ಮುಳ್ಳಿನ ಹಾಸಿಗೆ ಅಂತಾ ಗೊತ್ತಿದ್ದೆ, ಕೃಷಿ ಇಲಾಖೆ ಕೇಳಿದ್ದೆ ನಾನು ರೈತನ ಮಗನಾಗಿ ರೈತರ ಕಣ್ಣೀರು ಒರೆಸುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ನಾವು ರೈತರ ಮಕ್ಕಳಾಗಿ ರೈತರ ಕಣ್ಣೀರು ಒರೆಸದೆ, ರೈತರ ಸಮಸ್ಯೆಗೆ ಸ್ಪಂದಿಸದೇ ಓಡಿ ಹೋದರೆ ರೈತರನ್ನುನೋಡಿಕೊಳ್ಳುವವರು ಯಾರು? ಕೃಷಿ ಕೊಟ್ಟರೆ ಖುಷಿಯಿಂದ ಖಾತೆ ನಿರ್ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಅವರೊಂದಿಗೆ ಹೇಳಿದ್ದೆ ಎಂದರು. ಇದನ್ನೂ ಓದಿ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ
ಈ ಹಿಂದೆಯೂ ಕೃಷಿ ಸಚಿವನಾಗಿದ್ದೆ ಈಗಲೂ ಕೃಷಿ ಖಾತೆ ಸಿಕ್ಕಿದೆ. ಕೃಷಿ ಇಲಾಖೆಯಲ್ಲಿ ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲ ಆಗುತ್ತದೆ. ಕೃಷಿ ಖಾತೆ ಸಿಕ್ಕಿರೋದು ಖುಷಿಯಾಗಿದೆ. ಕೃಷಿಯಲ್ಲಿ ಹೊಸ ಹೊಸ ತಾಂತ್ರಿಕ ವ್ಯವಸ್ಥೆ ತಂದು ರೈತಪರವಾಗಿ ಕೆಲಸ ಮಾಡಲು ಸಜ್ಜಾಗಿದ್ದೇನೆ. ಖಾತೆ ಹಂಚಿಕೆ ವಿಚಾರದಲ್ಲಿ ಕೆಲವರ ಅಸಮಾಧಾನ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಂದೆ ಏನಾಗುತ್ತೆ ನೋಡೋಣ ಎಂದರು.