ನವದೆಹಲಿ/ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ರೈತರು ರೈಲ್ ರೋಕೋ ನಡೆಸಿದ್ರು. ಈ ವೇಳೆ ರೈತರಿಗಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರೇ ಇದ್ದರು. ಪಂಜಾಬ್, ಹರಿಯಾಣ, ಉತ್ತರಪ್ರದೇಶಗಳಲ್ಲಿ ರೈಲು ಹಳಿಗಳ ಮೇಲೆ ಕೂತು ರೈತರು ಪ್ರತಿಭಟನೆ ನಡೆಸಿದ್ರು. ಹಲವು ಕಡೆಗಳಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.
Advertisement
ರಾಜ್ಯದಲ್ಲಿ ಬೆಂಗಳೂರಿನ ಯಶವಂತಪುರ ರೈಲ್ವೇ ನಿಲ್ದಾಣದಲ್ಲಂತೂ ಪೊಲೀಸರು ಮತ್ತು ರೈತರ ನಡುವೆ ಹೈಡ್ರಾಮವೇ ನಡೆಯಿತು. ರೈಲ್ವೇ ನಿಲ್ದಾಣದ ಮುಂಭಾಗವೇ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರನ್ನು ಪೊಲೀಸರು ತಡೆದ್ರು. ಕೆಲ ರೈತರು ರೈಲ್ವೇ ಫ್ಲ್ಯಾಟ್ ಫಾರ್ಮ್‍ವರೆಗೂ ನುಗ್ಗಿದ್ದರು. ಕೆಲಕಾಲ ನೂಕುನುಗ್ಗಲು ಸೃಷ್ಟಿಯಾಯ್ತು. ಈ ವೇಳೆ ಗರಂ ಆದ ಕುರುಬೂರು ಶಾಂತಕುಮಾರ್, ನಿಮ್ ಕೈಯಲ್ಲಿ ರೌಡಿಗಳನ್ನು, ಗೂಂಡಾಗಳನ್ನು ಹಿಡಿಯೋದಕ್ಕೆ ಆಗಲ್ಲ. ನಮ್ಮನ್ನು ಹಿಡಿಯೋಕೆ ಬರ್ತೀರಾ..? ನಮ್ಮನ್ನು ತಳ್ತೀರಾ..? ನಾವೇನ್ ದೇಶದ್ರೋಹಿಗಳಾ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
Advertisement
ಬೆಳಗಾವಿಯಲ್ಲಂತೂ ರೈತರು-ಪೊಲೀಸರ ನಡುವೇ ತಳ್ಳಾಟ ನೂಕಾಟ ನಡೆಯಿತು. ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಸೇರಿ 20ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆಯಲಾಯ್ತು. ಮೈಸೂರಿನಲ್ಲಿ ಬಸ್ ಮೇಲಿದ್ದ ಪ್ರಧಾನಿ ಮೋದಿ, ಸಿಎಂ ಬಿಎಸ್‍ವೈ ಭಾವಚಿತ್ರ ಕಂಡು ರೈತರು ಶೂನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ರು.
Advertisement
ಹುಬ್ಬಳ್ಳಿಯಲ್ಲಿ ಕೇಂದ್ರದ ವಿರುದ್ಧ ಧಿಕ್ಕಾರ ಕೂಗಿದ್ರೆ, ಜಯಪುರದಲ್ಲಿ ರೇಲ್ವೇ ನಿಲ್ದಾಣದ ಎದುರು ರೈತ ಗೀತೆ ಹಾಡುವುದರ ಮೂಲಕ ಪ್ರತಿಭಟನೆ ಮಾಡಿದ್ರು. ರಾಯಚೂರಿನಲ್ಲಿ ರೈಲು ನಿಲ್ದಾಣದೊಳಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ್ರು.