– ಬರಡು ಭೂಮಿಯಲ್ಲಿ ಸ್ಟ್ರಾಬೆರ್ರಿ ಬೆಳೆದ ಯುವತಿ
– ಪ್ರಧಾನಿ ಮೋದಿಯಿಂದ ಮೆಚ್ಚುಗೆ
ಉತ್ತರ ಪ್ರದೇಶದ ಕಾನೂನು ಪದವೀಧರೆ ಲಾಕ್‍ಡೌನ್ ಸಮಯವನ್ನ ಸದುಪಯೋಗ ಮಾಡಿಕೊಂಡಿದ್ದು, ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಈಗ ಬರಡು ಭೂಮಿಯಿಂದಲೇ ಲಕ್ಷ ಲಕ್ಷ ಹಣವನ್ನ ಯುವತಿ ಸಂಪಾದನೆ ಮಾಡುತ್ತಿದ್ದಾರೆ.
Advertisement
ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್: ಝಾನ್ಸಿ ನಿವಾಸಿ 23 ವರ್ಷದ ಗುರ್ಲಿನ್ ಚಾವ್ಲಾ ಕೃಷಿಯನ್ನ ಕಂಡ ಯುವತಿ. ಇದೀಗ ಝಾನ್ಸಿಯಲ್ಲಿ ಸ್ಟ್ರಾಬೆರ್ರಿ ಗರ್ಲ್ ಅಂತಾನೇ ಗುರುತಿಸಿಕೊಂಡಿದ್ದಾರೆ. ಕಳೆದ ಭಾನುವಾರ ಮನ್ ಕೀ ಬಾತ್ ನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಸಹ ಗುರ್ಲಿನ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವರ್ಷ ಮಹಾರಾಷ್ಟ್ರದ ಪುಣೆಯಿಂದ ಕಾನೂನು ಪದವಿ ಪಡೆದುಕೊಂಡಿದ್ದಾರೆ. ನಾನು ಕೃಷಿಯಲ್ಲಿ ತೊಡಗಿಕೊಳ್ಳುತ್ತೇನೆಂದು ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ. ಲಾಕ್‍ಡೌನ್ ವೇಳೆ ಊರಿಗೆ ಬಂದು ಮನೆಯಲ್ಲಿ ಖಾಲಿ ಕುಳಿತುಕೊಂಡಿದ್ದೆ. ಗಾಡರ್ನಿಂಗ್ ನಲ್ಲಿ ಈ ಸಮಯ ಬಳಸಿಕೊಳ್ಳಬೇಕೆಂದು ನಿರ್ಧರಿಸಿದೆ. ಹಾಗಾಗಿ ಮನೆಯಲ್ಲಿಯೆ ಕೆಲ ಸ್ಟ್ರಾಬೆರಿ ಪ್ಲಾಂಟಿಂಗ್ ಮಾಡಿದೆ. ಕೆಲವೇ ದಿನಗಳಲ್ಲಿ ಹಣ್ಣುಗಳ ಮೂಲಕ ಪ್ರತಿಫಲ ನನ್ನದಾಯ್ತು ಎಂದು ಗುರ್ಲಿನ್ ಹೇಳುತ್ತಾರೆ.
Advertisement
Advertisement
ಆನ್‍ಲೈನ್ ನಲ್ಲಿ ಸ್ಟ್ರಾಬೆರ್ರಿ ಪ್ಲಾಂಟ್ ಹೇಗೆ ಬೆಳೆಯಬೇಕೆಂದು ಗುರ್ಲಿನ್ ಕಲಿತುಕೊಂಡಿದ್ದರು. ಇನ್ನು ಗುರ್ಲಿನ್ ಸಾಧನೆಗೆ ಅವರ ತಂದೆ ಬೆನ್ನಲುಬಾಗಿ ನಿಂತಿದ್ದರು. ಗುರ್ಲಿನ್ ಆಸೆಯಂತೆ ನಾಲ್ಕು ಎಕರೆ ಜಮೀನಿನ ಪೈಕಿ ಒಂದೂವರೆ ಎಕರೆ ಭೂಮಿಯಲ್ಲಿ 20 ಸಾವಿರ ಸ್ಟ್ರಾಬೆರ್ರಿ ಪ್ಲಾಂಟ್ ತಂದು ನೆಟ್ಟಿದ್ದರು. ಅಂದಿನಿಂದ ಗುರ್ಲಿನ್ ರೈತ ಮಹಿಳೆಯಾಗಿ ಪ್ಲಾಂಟ್ ಆರೈಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರೆಲ್ಲರ ಪರಿಣಾಮ ಡಿಸೆಂಬರ್ ವೇಳೆಗೆ ಸ್ಟ್ರಾಬೆರ್ರಿ ಹಣ್ಣುಗಳ ಗುರ್ಲಿನ್ ಕೈ ಸೇರಿದ್ದವು.
Advertisement
ದಿನಕ್ಕೆ 250ಕ್ಕೂ ಹೆಚ್ಚು ಆರ್ಡರ್, 30 ಸಾವಿರ ವ್ಯಾಪಾರ:
ಹಣ್ಣುಗಳು ಬಿಡಲು ಆರಂಭಿಸುತ್ತಿದ್ದಂತೆ ಸ್ಟ್ರಾಬೆರ್ರಿ ಮಾರಾಟಕ್ಕಾಗಿ ಸ್ಥಳೀಯ ಮಾರುಕಟ್ಟೆಯ ಸಂಪರ್ಕ ಮಾಡಿದ್ದರು. ವ್ಯಾಪಾರಸ್ಥರು ಹಣ್ಣುಗಳ ಗುಣಮಟ್ಟಕ್ಕೆ ಮೆಚ್ಚುಗೆ ಸೂಚಿಸಿ ಆರ್ಡರ್ ನೀಡಲಾರಂಭಿಸಿದರು. ಇದೀಗ ಹಲವು ಸೂಪರ್ ಮಾರ್ಕೆಟ್ ಗಳು ಗುರ್ಲಿನ್ ಅವರಿಂದ ಹಣ್ಣುಗಳನ್ನ ಖರೀದಿಸುತ್ತಿವೆ. ಇದೀಗ ತಮ್ಮದೇ ವೆಬ್‍ಸೈಟ್ ಆರಂಭಿಸಿರುವ ಗುರ್ಲಿನ್ ಆನ್‍ಲೈನ್ ಮೂಲಕ ಸಹ ಆರ್ಡರ್ ಗಳನ್ನ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಸುಮಾರು 70 ಕೆಜಿ ಸ್ಟ್ರಾಬೆರ್ರಿ ಸಿಗುತ್ತೆ. 250ಕ್ಕೂ ಹೆಚ್ಚು ಆರ್ಡರ್ ಪಡೆಯುವ ಗುರ್ಲಿನ್ ಪ್ರತಿನಿತ್ಯ 30 ಸಾವಿರ ರೂ.ನಷ್ಟು ವ್ಯಾಪಾರ ಮಾಡುತ್ತಾರೆ. ಮಿಶ್ರ ಬೇಸಾಯ ಪದ್ಧತಿಯನ್ನ ಅಳವಡಿಸಿಕೊಂಡಿರುವ ಗುರ್ಲಿನ್ ತರಕಾರಿಯನ್ನ ಸಹ ಬೆಳೆಯುತ್ತಾರೆ.
ಕುಣಿದು ಕುಪ್ಪಳಿಸಿದ ಗುರ್ಲಿನ್ ತಂದೆ:
ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡು ಐದು ತಿಂಗಳು ಕಳೆಯುವಷ್ಟರಲ್ಲಿಯೇ ಝಾನ್ಸಿಯಲ್ಲಿ ಆಯೋಜಿಸಿದ ಸ್ಟ್ರಾಬೆರ್ರಿ ಫೆಸ್ಟಿವಲ್ ಗೆ ರಾಯಭಾರಿಯನ್ನಾಗಿ ಸಿಎಂ ಯೋಗಿ ಆದಿತ್ಯನಾಥ್ ನೇಮಕ ಮಾಡಿದ್ರು. ಗುರ್ಲಿನ್ ತಂದೆ ಹರ್ಜಿತ್ ಸಿಂಗ್ ಸಾರಿಗೆ ಉದ್ಯಮಿಯಾಗಿದ್ದಾರೆ. ಪ್ರಧಾನಿಗಳು ಮಗಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಕ್ಕೆ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಕಚೇರಿಗೆ ಗುರ್ಲಿನ್ ಹಾಗೂ ಅವರ ಕುಟುಂಬವನ್ನ ಕರೆಸಿಕೊಂಡಿದ್ದರು. ಈ ವೇಳೆ ಗುರ್ಲಿನ್ ತಾವು ಬೆಳೆದ ಸ್ಟ್ರಾಬೆರ್ರಿಗಳನ್ನ ಉಡುಗೊರೆಯಾಗಿ ಮುಖ್ಯಮಂತ್ರಿಗಳಿಗೆ ನೀಡಿದ್ದಾರೆ.
ಸ್ಟ್ರಾಬೆರ್ರಿ ಬೆಳೆಯೋದು ಹೇಗೆ?:
ಸ್ಟ್ರಾಬೆರ್ರಿಯನ್ನು ಲೋಮಿ ಮಣ್ಣಿನಲ್ಲಿ ಬೆಳೆಯೋದು ಸೂಕ್ತ. ಈ ಮಣ್ಣು ಸರಿಯಾದ ಆಮ್ಲಿಯತೆ ಕಾಪಾಡುವ ಖನಿಜ ಅಂಶಗಳನ್ನ ಹೊಂದಿರುತ್ತೆ. ಈ ಮಣ್ಣಿನ ಸ್ಥಿತಿಯನ್ನ ಕಾಪಾಡಿಕೊಳ್ಳಲು ಸಾವಯವ ಗೊಬ್ಬರಗಳನ್ನ ವಾರ್ಷಿಕವಾಗಿ ಬಳಕೆ ಮಾಡಿಕೊಂಡಿರಬೇಕು. ಆಗಸ್ಟ್-ಸೆಪ್ಟೆಂಬರ್ ನಲ್ಲಿ ಸ್ಟ್ರಾಬೆರ್ರಿಗಳನ್ನ ಪ್ಲಾಂಟ್ ಮಾಡಬೇಕು. ಸಸಿಗಳ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಶಾಖ ಹೆಚ್ಚಾದ್ರೆ ಪ್ಲಾಂಟ್ ಒಣಗಿ, ಹಣ್ಣುಗಳ ಕೆಡುತ್ತವೆ. ಆದ್ರೆ ಬುಂದೇಲಖಂಡ್ ನಲ್ಲಿ ಸಾಮಾನ್ಯ ವಾಗಿ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತೆ. ಅದ್ರೂ ಛಲ ಬಿಡದ ಗುರ್ಲಿನ್ ವೈಜ್ಞಾನಿಕ ನಿಯಮಗಳನ್ನು ಪಾಲಿಸಿ ಸ್ಟ್ರಾಬೆರ್ರಿ ಬೆಳೆದಿದ್ದಾರೆ.