ಕುಡಿಯಲು ಹಣ ಕೊಡದ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ!

Public TV
1 Min Read
KLR WIFE

ಕೋಲಾರ: ಕುಡಿತದ ಚಟಕ್ಕೆ ಬಿದ್ದಿದ್ದ ಪಾಪಿ ಗಂಡ ಕುಡಿಯೋದಕ್ಕೆ ಹಣ ಕೊಡದ ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

crime scene e1602054934159

ನಾಗನಾಳ ಗ್ರಾಮದ ಸೋಮಶೇಖರ್ ಎಂಬಾತ ತನಗೆ ಕುಡಿಯಲು ಹಣ ಕೊಡದ ತನ್ನ ಹೆಂಡತಿ ವಿಜಯಲಕ್ಷ್ಮಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. 14 ವರ್ಷದ ಹಿಂದೆ ಇವರಿಬ್ಬರು ಮದುವೆಯಾಗಿದ್ದರು. ಆದರೆ ಸೋಮಶೇಖರ್ ಪ್ರತಿದಿನ ಕುಡಿದು ಬಂದು ಕಿರುಕುಳ ನೀಡುತ್ತಿದ್ದನಂತೆ. ಕುಡುಕ ಗಂಡನ ಕಿರಕುಳದಿಂದಾಗಿ ವಿಜಯಲಕ್ಷ್ಮಿ ಕೂಲಿ ಕೆಲಸಕ್ಕೆ ಹೋಗಿ ಜೀವನ ಸಾಗಿಸುತ್ತಿದ್ದಳು. ಕೂಲಿಯಲ್ಲಿ ಬಂದ ಹಣವನ್ನು ಬಿಡದೆ ಕುಡಿದು ಮುಗಿಸುತ್ತಿದ್ದ. ಎರಡು ವರ್ಷಗಳ ಹಿಂದೆ ಕುಡಿಯಲು ಹಣ ನೀಡಿಲ್ಲ ಎಂದು ತನ್ನ ನಾಲ್ಕು ವರ್ಷದ ಮಗ ಗೌತಮ್ ಎಂಬಾತನನ್ನು ಹೊಡೆದು ಕೊಂದು ತನ್ನ ಮೃಗರೂಪ ಮೆರೆದಿದ್ದ ಎಂದು ಹೇಳಲಾಗುತ್ತಿದೆ.

varthur prakash case kolar rural police station
ವಿಜಯಲಕ್ಷ್ಮಿಗೆ ಪತಿ ಸೋಮಶೇಖರ್ ಸುತ್ತಿಗೆಯಿಂದ ಹೊಡೆದು ಪರಾರಿಯಾಗಿದ್ದಾನೆ. ಕೂಡಲೇ ಅಕ್ಕಪಕ್ಕದ ಮನೆಯವರು ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದರಾದರೂ ವಿಜಯಲಕ್ಷ್ಮಿ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾಳೆ. ವಿಷಯ ತಿಳಿದ ವಿಜಯಲಕ್ಷ್ಮಿ ಸಂಬಂಧಿಕರು ಆಘಾತಗೊಂಡಿದ್ದಾರೆ.

ಹೆಂಡತಿಯನ್ನು ಕೊಲೆ ಮಾಡಿದ್ದ ಸೋಮಶೇಖರ್ ಕುಡಿಯಲು ಹಣ ಸಿಕ್ಕೊಡನೆ ಅಲ್ಲಿಂದ ಪರಾರಿಯಾಗಿದ್ದ. ಆತನನ್ನು ಬಂಧಿಸುವವರೆಗೂ ಶವವನ್ನು ಇಲ್ಲಿಂದ ತೆಗೆಯಲು ಬಿಡುವುದಿಲ್ಲ ಎಂದು ವಿಜಯಲಕ್ಷ್ಮಿಯ ಸಂಬಂಧಿಕರು ಪಟ್ಟುಹಿಡಿದಿದ್ದಾರೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳ ನಡೆಯಿತು. ಕೋಲಾರ ಗ್ರಾಮಾಂತರ ಪೊಲೀಸರು ಹಾಗೂ ವೇಮಗಲ್ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *