– ರೈನ್ ಕೋಟ್ ಅಂತ ಕದ್ದು ಪೇಚಿಗೆ ಸಿಲುಕಿದ
ಮುಂಬೈ: ಮಹಾಮಾರಿ ಕೊರೊನಾ ವೈರಸ್ ಭಾರತಕಕೆ ಕಾಲಿಟ್ಟ ಬಳಿಕ ಅನೇಕ ಅನಾಹುತಗಳು ನಡೆದು ಹೋಗಿವೆ. ಮದ್ಯ ಸಿಗದೆ ಕೆಲವರು ಸ್ಯಾನಿಟೈಸರ್ ಕುಡಿದು ಮೃತಪಟ್ಟಿದ್ದಾರೆ. ಆದರೆ ಇಲ್ಲೊಬ್ಬ ಕುಡಿದ ಮತ್ತಿನಲ್ಲಿ ರೈನ್ ಕೋಟ್ ಅಂತ ತಿಳಿದು ಪಿಪಿಇ ಕಿಟ್ ಕದ್ದು ಪೇಚಿಗೆ ಸಿಲುಕಿದ್ದಾನೆ.
Advertisement
ಈ ವಿಲಕ್ಷಣ ಘಟನೆ ಮಹಾರಾಷ್ಟ್ರದ ನಾಗ್ಪುರ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಕಂಠಪೂರ್ತಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ರೈನ್ ಕೋಟ್ ಎಂದು ಪಿಪಿಇ ಕಿಟ್ ಕದ್ದಿದ್ದು, ಈಗ ಆತನಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ.
Advertisement
ವ್ಯಕ್ತಿ ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಿದ್ದನು. ಆದರೆ ಕಳೆದ ವಾರ ಮದ್ಯಪಾನ ಮಾಡಿ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಚರಂಡಿಗೆ ಬಿದ್ದು ಗಾಯಗೊಂಡಿದ್ದನು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆಂದು ನಾಗ್ಪುರದ ಮಯೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
Advertisement
ಹೀಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮನೆಗೆ ಬಂದಾಗ ಈತನ ಬಳಿ ಪಿಪಿಯ ಕಿಟ್ ಇರುವುದು ಬೆಳಕಿಗೆ ಬಂದಿದೆ. ಅಲ್ಲದೆ ಈತ ತನ್ನ ಗೆಳೆಯರ ಬಳಿ, 1 ಸಾವಿರ ಕೊಟ್ಟು ರೈನ್ ಕೋಟ್ ತೆಗೆದುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಗೆಳೆಯರಿಗೆ ಮಾತ್ರ ಅದು ರೈನ್ ಕೋಟ್ ಅಲ್ಲ, ಪಿಪಿಇ ಕಿಟ್ ಎಂದು ಗೊತ್ತಾಗಿದೆ. ಕೂಡಲೇ ಅವರು ನಗರದ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಂತೆಯೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯಿಂದ ಪಿಪಿಇ ಕಿಟ್ ವಶಕ್ಕೆ ಪಡೆದು ಅಲ್ಲೇ ಸುಟ್ಟು ಹಾಕಿದ್ದಾರೆ.
ಬಳಿಕ ವ್ಯಕ್ತಿಯನ್ನು ಪ್ರಶ್ನಿಸಿದಾಗ ಆತ ಚಿಕಿತ್ಸೆಯ ಸಂದರ್ಭದಲ್ಲಿ ಆಸ್ಪತ್ರೆಯಿಂದ ಪಿಪಿಇ ಕಿಟ್ ಕದ್ದಿರುವುದಾಗಿ ಬಾಯ್ಬಿಟ್ಟಿದ್ದಾನೆ. ಆ ಬಳಿಕ ಆತನನ್ನು ಕೋವಿಡ್ 19 ಟೆಸ್ಟ್ ಗೆ ಒಳಪಡಿಸಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ. ಕೂಡಲೇ ಅಧಿಕಾರಿಗಳು, ಆತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಟೆಸ್ಟ್ ಗೆ ಒಳಪಡಿಸಿದ್ದಾರೆ.