ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಮಗನೇ ತಂದೆಗೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಕೇಶ್ವಾಪುರದ ವೆಂಕಟೇಶ ಕಾಲೋನಿಯ ಕಾಳೆ ಲೇಔಟ್ ನಲ್ಲಿ ನಡೆದಿದೆ.
ಶ್ರೀಧರ ಎಂಬಾತನ ಮಗನೇ ತಂದೆ ಮುದಕಪ್ಪ ದೇವನೂರಗೆ ಆಸ್ತಿಯಲ್ಲಿ ಪಾಲು ಕೊಡುವಂತೆ ಕೇಳಿದ್ದ. ಇದೇ ವಿಚಾರವಾಗಿ ತಂದೆಯ ಜೊತೆ ಜಗಳವಾಡುತ್ತಿದ್ದ ಮಗ ಮಂಗಳವಾರ ರಾತ್ರಿ ತಂದೆಗೆ ಕುಡಿದ ಅಮಲಿನಲ್ಲಿ ಚಾಕು ಇರಿದಿದ್ದಾನೆ.
ಚಾಕು ಇರಿತದಿಂದ ಗಾಯಗೊಂಡಿರುವ ತಂದೆ ಮುದಕಪ್ಪನನ್ನ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಚಾಕು ಇರಿದ ನಂತರ ಮಗ ಶ್ರೀಧರ ಪರಾರಿಯಾಗಿದ್ದಾನೆ.
ಘಟನೆಯ ಕುರಿತು ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.