– ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿ
ದಿಸ್ಪರ್: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮದುವೆಯಲ್ಲಿದ್ದ ಕ್ಯಾಟರರ್ ಮೇಲೆ ಹಲ್ಲೆ ಮಾಡಿ ಇರಿದು ಕೊಂದಿರುವ ಘಟನೆ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯ ಹೋಟೆಲೊಂದರಲ್ಲಿ ನಡೆದಿದೆ.
ಕುಡಿದು ಮದುವೆಗೆಂದು ಹೋಟೆಲ್‍ಗೆ ಬಂದಿರುವ ವ್ಯಕ್ತಿ, ಮೂರು ಮಂದಿ ಕ್ಯಾಟರರ್ ಮೇಲೆ ಹಲ್ಲೆ ಮಾಡಿದ್ದಾನೆ ಮತ್ತು ವ್ಯಕ್ತಿಯೊಬ್ಬನನ್ನು ಇರಿದು ಕೊಲೆ ಮಾಡಿದ್ದಾನೆ. ಹಲ್ಲೆಗೊಳಗಾದವರನ್ನು ಸುನಿಲ್ ಮೊಂಡೋಲ್, ಬಿಮಲ್ ಗೊಗೊಯ್ ಮತ್ತು ಮೋನುಜ್ ಶರ್ಮಾ ಎಂದು ಗುರುತಿಸಲಾಗಿದೆ. ಸುನಿಲ್ ಮೊಂಡೋಲ್ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಘಟನೆ ಹಿನ್ನಲೆ:
ಮೂಲಗಳ ಪ್ರಕಾರ ಹೋಟೆಲ್ ನೀಲಮಣಿಯಲ್ಲಿ ಮದುವೆ ಪಾರ್ಟಿ ನಡೆಯುತ್ತಿತ್ತು. ಆಗ ಕುಡಿದು ಬಂದ ವ್ಯಕ್ತಿ ಆಹಾರ ಸೇವಕ(ಕ್ಯಾಟರೆರ್) ರೊಂದಿಗೆ ಗಲಾಟೆ ಮಾಡಿದ್ದಾನೆ. ಅವರಲ್ಲಿ ತಿವ್ರ ವಾಗ್ವಾದ ನಡೆದಿದೆ. ನಂತರ ಮೂರು ಜನರ ಮೇಲೆ ಕುಡಿದು ಬಂದಿರುವ ವ್ಯಕ್ತಿ ಹಲ್ಲೆ ಮಾಡಿದ್ದಾನೆ. ಈ ವೇಳೆ ಕ್ಯಾಟರೆರ್ ಮಾಡುವ ಮೂವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಒಬ್ಬರು ಸಾವನ್ನಪ್ಪಿದ್ದಾರೆ. ಘಟನೆ ನಡೆದ ಹೋಟೆಲ್‍ನಿಂದ ಭಾರೀ ಪ್ರಮಾಣದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹಲ್ಲೆಗೊಳಗಾದವರು ಮದುವೆ ಪಾರ್ಟಿಯಲ್ಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಮೃತಪಟ್ಟ ಸುನಿಲ್ ಮೊಂಡೋಲ್ ಬಿಹಾರದ ನಿವಾಸಿಯಾಗಿದ್ದಾರೆ. ಘಟನೆಯ ನಂತರ ಆರೋಪಿ ಹೋಟೆಲ್‍ನಿಂದ ಪರಾರಿಯಾಗಿದ್ದಾನೆ. ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದುಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.