ಕುಡಿತದ ಅಮಲಿನಲ್ಲಿ ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಎಸ್ಕೇಪ್ ಆದ ಪತಿರಾಯ

Public TV
2 Min Read
New Delhi Wife Husband

– ಮೊದಲ ಮಗುವಿನ ಕೈಕಾಲು ಕಟ್ಟಿ, ಪತ್ನಿಗೆ ಹಲವಾರು ಬಾರಿ ಚುಚ್ಚಿ ಮರ್ಡರ್

ನವದೆಹಲಿ: ಕುಡಿತದ ಅಮಲಿನಲ್ಲಿ ಪತಿಯೋರ್ವ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿ ಹೊರವಲಯದ ನಿಹಾಲ್ ವಿಹಾರ್ ಫ್ಲಾಟ್‍ನಲ್ಲಿ ನಡೆದಿದೆ.

ಕೊಲೆಯಾದವರನ್ನು 29 ವರ್ಷದ ಪ್ರೀತಿ ಮತ್ತು ಆಕೆ 9 ಮತ್ತು 5 ವರ್ಷದ ಮಕ್ಕಳು ಎಂದು ಗುರುತಿಸಲಾಗಿದೆ. ಕೊಲೆಯ ನಂತರ ಪ್ರೀತಿಯ ಗಂಡ ಗಗನ್ ಎಸ್ಕೇಪ್ ಆಗಿದ್ದು, ಆತನೇ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಜೊತೆಗೆ ಪ್ರೀತಿಯ ಹೊಟ್ಟೆಗೆ ಹಲವು ಬಾರಿ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

drinks 1

ಕಳೆದ ತಿಂಗಳು ತಾನೇ ಶಿವ ಪಾರ್ಕ್‍ನಲ್ಲಿರುವ ಫ್ಲಾಟ್‍ಗೆ ಈ ಜೋಡಿ ಹೊಸದಾಗಿ ಬಾಡಿಗೆಗೆ ಬಂದಿತ್ತು. ಪ್ರೀತಿಯವರ ಪೋಷಕರು ಕೂಡ ಹತ್ತಿರದಲ್ಲೇ ವಾಸವಿದ್ದರು. ಮಗಳ ಕೊಲೆಯ ಬಗ್ಗೆ ಮಾತನಾಡಿರುವ ಅವರ ಪೋಷಕರು, ಪ್ರೀತಿ ಗಂಡ ಗಗನ್ ಕುಡಿತದ ಚಟಕ್ಕೆ ದಾಸನಾಗಿದ್ದ. ಕುಡಿದು ಬಂದು ಪ್ರೀತಿಗೆ ಹಿಂಸೆ ಕೊಡುತ್ತಿದ್ದ. ಹೀಗಾಗಿ ಆತನೇ ಈ ರೀತಿ ಕ್ರೂರವಾಗಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಎಷ್ಟು ಬಾರಿ ಕರೆ ಮಾಡಿದರು ಪ್ರೀತಿ ಫೋನ್ ತೆಗೆಯಲಿಲ್ಲ. ಆದ ಕಾರಣ ಅಲ್ಲಿಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂತು ಎಂದು ಪೋಷಕರು ತಿಳಿಸಿದ್ದಾರೆ.

marriage 1

ಪೋಷಕರು ಕರೆ ಮಾಡುತ್ತಿದಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿದ್ದಾರೆ. ಬೆಡ್‍ರೂಮ್‍ನಲ್ಲಿ ಪ್ರೀತಿ ಮತ್ತು ಇಬ್ಬರು ಮಕ್ಕಳು ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದರು. ಪ್ರೀತಿಯ ಹೊಟ್ಟೆಗೆ ಹಲವಾರು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಜೊತೆಗೆ ಹಿರಿಯ ಮಗುವನ್ನು ಕೈಕಾಲು ಕಟ್ಟಲಾಗಿತ್ತು. ಪಕ್ಕದಲ್ಲೇ 5 ವರ್ಷದ ಕಂದಮ್ಮ ಸಾವನ್ನಪ್ಪಿತ್ತು. ಆದರೆ ಮನೆಯಲ್ಲಿ ಗಗನ್ ಇರಲಿಲ್ಲ. ಆತ ಎಸ್ಕೇಪ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

police 1 e1585506284178

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಹೊರವಲಯದ ಡಿಸಿಪಿ ಎ ಕೋನ್ ಅವರು, ಅಪರಾಧಕ್ಕೆ ಬಳಸಿದ್ದ ಆಯುಧವನ್ನು ವಶಕ್ಕೆ ಪಡೆಯಲಾಗಿದೆ. ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗಗನ್ ಮತ್ತು ಅವರ ಮನೆಯ ಕೆಲಸಗಾರನ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಆಗಬೇಕಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *