ಕುಂಭಮೇಳದಲ್ಲಿ ಕಾವಿಧಾರಿ ಮುಸ್ಲಿಂ ಯೋಗಿ

Public TV
1 Min Read
muslim yogi

ಡೆಹ್ರಾಡೂನ್: ವೈಷ್ಣವರಂತೆ ಹಣೆ ಮೇಲೆ ‘ಯು’ ಆಕಾರದ ಶ್ರೀಗಂಧದ ತಿಲಕ, ಕೇಸರಿ ಬಣ್ಣದ ಕುರ್ತಾ, ಪಂಚೆ ಧರಿಸಿದ ಮುಸ್ಲಿಂ ಕಾವಿಧಾರಿಯೊಬ್ಬರು ಹರಿದ್ವಾರದ ಕುಂಭಮೇಳದಲ್ಲಿ ಎಲ್ಲರ ಆಕರ್ಷಣೆಯಾಗಿದ್ದಾರೆ.

ದಿನಪೂರ್ತಿ ಮಂತ್ರ, ಭಜನೆ ಪಠನ ಹರಿದ್ವಾರದಲ್ಲಿ ನಡೆಯುತ್ತಿರುವ ಮಹಾಕುಂಭದ ಬೈರಾಗಿ ಕ್ಯಾಂಪ್‍ನಲ್ಲಿ ಶ್ರೀ ‘ಎಂ’ ಅನ್ಯ ಸಾಧುಗಳಂತೆಯೇ ಕಾಣಿಸುತ್ತಾರೆ. ಆದರೆ ಇವರು ಮುಸ್ಲಿಂ ಧರ್ಮಿಯರಾಗಿದ್ದಾರೆ.

haridwar

ದೇವರಿಗೆ ಕೃಷ್ಣ, ಅಲ್ಲಾ, ಕ್ರಿಸ್ತ ಹೀಗೆ ಮುಂತಾದ ನಾಮಗಳಿವೆ. ಈ ಹೆಸರುಗಳ ಹೊರತಾಗಿ ದೇವರೊಬ್ಬನೇ ಒಮ್ಮೆ ಈ ಸತ್ಯವನ್ನು ನಾವು ಅರಿತುಕೊಂಡರೆ ಭಗವಂತನನ್ನು ಕಾಣುವುದು ಸುಲಭ ಎಂದು ಶ್ರೀ ಎಂ ಹೇಳುತ್ತಾರೆ. ಇವರು ಕುಂಬಮೇಳದಲ್ಲಿ ಎಲ್ಲರ ಆಕರ್ಷಣೆಗೆ ಇವರು ಪಾತ್ರರಾಗಿದ್ದರು.

kumbamela 2

ಕೇರಳದ ಮುಸ್ಲಿಂ ಕುಟುಂಬದ ಶ್ರೀ ಎಂ ಅವರ ಬಾಲ್ಯದ ಹೆಸರು ಮಮ್ತಾಜ್ ಅಲಿ ಖಾನ್ ಆಗಿದ್ದಾರೆ. ಬಾಲ್ಯದಲ್ಲಿ ಹಿಂದೂ ಧರ್ಮದ ಸೆಳೆತಕ್ಕೆ ಒಳಗಾಗಿದ್ದರು. ತಮ್ಮ 19ನೇ ವಯಸ್ಸಿಗೆ ಮನೆಯನ್ನು ತೊರೆದು ಹಿಮಾಲಯದಲ್ಲಿ ಗುರುವಿನ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಆಂಧ್ರಪ್ರದೇಶದ ಮಾದನಪಲ್ಲಿಯಲ್ಲಿ ಸತ್ಸಂಗ ಫೌಂಡೇಶನ್ ಶಾಲೆ ಮತ್ತು ಕ್ಲಿನಿಕ್ ಮುನ್ನಡೆಸುತ್ತಿರುವ ಇವರು ಹಿಂದು ವರ್ಗಗಳಿಗೆ ಆಧ್ಯಾತ್ಮಿಕ ಶಿಕ್ಷಣ ನೀಡುತ್ತಿದ್ದಾರೆ. ಶ್ರೀ ಎಂ ಅವರ ಈ ಕಾರ್ಯಕ್ಕೆ ಕಳೆದ ವರ್ಷ ಪದ್ಮಭೂಷಣ ಪ್ರಶಸ್ತಿಯೂ ಒಲಿದುಬಂದಿತ್ತು.

kumbamela 3

ಋಷಿಕೇಶದಿಂದ ಬದರಿನಾಥ್ವರೆಗೆ ಸಾಧುವಿನಂತೆ ಅಲೆದ ಇವರಿಗೆ ಕೊನೆಗೂ ಬದರಿನಾಥ್‍ದ ಹಿಂದೂ ಹುಗೆಯೊಂದರಲ್ಲಿ ಮಹಾನ್ ಯೋಗಿ ದರ್ಶನ ಸಿಕ್ಕಿತು. ಅಲ್ಲಿಂದ ಇವರ ಬದುಕಿನ ದಿಕ್ಕೇ ಬದಲಾಯಿತು. ಕುಂಬ ಮೇಳದಲ್ಲಿ ಇವರ ವೇದೋಪನಿಷತ್, ಯೋಗ ಸೂತ್ರಗಳ ಕುರಿತ ಪ್ರವಚನ ಕೇಳಲು ಭಕ್ತಾಧಿಗಳು ಮುಗಿಬಿದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *