ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಸದ್ಯ ಕಿಚ್ಚ ಅನಾರೋಗ್ಯದ ಸಮಸ್ಯೆ ಇರುವುದರಿಂದ ಮನೆಯಲ್ಲಿಯೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
ಆದ್ರೆ ಅಭಿಮಾನಿಗಳು ಮಾತ್ರ ಕಿಚ್ಚ ಸುದೀಪ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ದೇವಾಲಯವೊಂದರಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಈ ವೀಡಿಯೋವನ್ನು ಕಿಚ್ಚ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೆನ್ನಗಿರಿಯ ತಾಲೂಕಿನ ಅಖಿಲ ಕರ್ನಾಟಕ ವಾಲ್ಮೀಕಿ ರತ್ನ ಬಾದ್ ಷಾ ಕಿಚ್ಚ ಸುದೀಪ್ ಸೇನೆ ಸದಸ್ಯರು ಆಂಜನೇಯ ದೇವಸ್ಥಾನದಲ್ಲಿ ಸುದೀಪ್ ಅವರು ಚೇತರಿಸಿಕೊಳ್ಳಲಿ ಎಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಅದರಲ್ಲೂ ವಿಕಲಚೇತನ ಅಭಿಮಾನಿಯೊಬ್ಬ ಸುದೀಪ್ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಸನ್ನಧಿಯಲ್ಲಿ ಬೇಡಿಕೊಳ್ಳುತ್ತಿರುವ ವೀಡಿಯೋವನ್ನು ಸಹ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ಈ ಪ್ರೀತಿಗೆ ಸದಾ ಚಿರಋಣಿ ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ.
Ee Preethige sadhaa chiraruni geleya…
???????????????????????????????????????????? pic.twitter.com/Q8PAfopwdl
— Kichcha Sudeepa (@KicchaSudeep) April 20, 2021
ಕಳೆದ ವಾರ ಬಿಗ್‍ಬಾಸ್ ಸೀಸನ್-8 ಕಾರ್ಯಕ್ರಮಕ್ಕೂ ಕೂಡ ಕಿಚ್ಚ ಗೈರಾಗಿದ್ದರು.