ಲಕ್ನೋ: ಹುಟ್ಟುತ್ತಲೇ ಅಂಗವಿಕಲನಾಗಿ ಬೆಳೆದ ಲಕ್ನೋ ಯುವಕ ಕಾಲಿನ ಮೂಲಕ ಪರೀಕ್ಷೆ ಬರೆದು ಶೇ.70 ಪಡೆದು ಪಾಸ್ ಆಗಿದ್ದಾರೆ.
ತುಷಾರ್ ವಿಶ್ವಕರ್ಮ ಎಂಬವರು ಪೆನ್ನನ್ನು ಕಾಲಿನಲ್ಲಿ ಹಿಡಿದು ಬರೆಯುವುದಕ್ಕೆ ಅಭ್ಯಾಸ ಮಾಡಿಕೊಂಡಿದ್ದರು. ಇದೀಗ 12ನೇ ತರಗತಿ ಪರೀಕ್ಷೆಯನ್ನು ತಮ್ಮ ಕಾಲಿನ ಬೆರಳುಗಳ ಮೂಲಕ ಬರೆದು ಶೇ.70 ಪಡೆದು ಉತ್ತೀರ್ಣರಾಗಿದ್ದಾರೆ.
Advertisement
Advertisement
ಸೃಜನಶೀಲ ಕಾನ್ವೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ತಾನು ಹುಟ್ಟಿನಿಂದಲೂ ಕೈಗಳನ್ನು ಕಳೆದುಕೊಂಡಿದ್ದೇನೆ. ಆದರೆ ಅದನ್ನು ನನ್ನ ಅಸಹಾಯಕತನ ಎಂದು ಭಾವಿಸಲಿಲ್ಲ. ನನ್ನ ಇಬ್ಬರು ಅಣ್ಣಂದಿರು ಶಾಲೆಗೆ ಹೋಗುವಾಗ, ನಾನು ಕೂಡ ಶಾಲೆಗೆ ಹೋಗಬೇಕೆಂದು ನಿರ್ಧರಿಸಿ ಪೋಷಕರಿಗೆ ಕೇಳಿಕೊಂಡೆ. ನಂತರ ನನ್ನ ಕೈಯಲ್ಲಿ ಬರೆಯಲು ಅಸಾಧ್ಯ ಎಂದು ನನ್ನ ಸಹೋದರರಿಗೆ ನನ್ನ ಬದಲಾಗಿ ಬರೆಯುವಂತೆ ಪೋಷಕರು ಹೇಳುತ್ತಿದ್ದರು. ಆಗ ನಾನು ನನ್ನ ಪಾದಗಳನ್ನು ನನ್ನ ಕೈಗಳಾಗಿ ಮಾಡಿಕೊಂಡು ಬರೆಯಲು ಆರಂಭಿಸಿದೆ ಎಂದು ಹೇಳಿದ್ದಾರೆ.
Advertisement
Advertisement
ಪರೀಕ್ಷೆ ವೇಳೆ ತುಷಾರ್ ಬರೆಯಲು ಯಾರ ಸಹಾಯವನ್ನು ಪಡೆಯದೇ ಪರೀಕ್ಷೆಯನ್ನು ಪೂರ್ಣಗೊಳಿಸಲು ಕೊಂಚ ಹೆಚ್ಚು ಸಮಯ ನೀಡುವಂತೆ ಶಿಕ್ಷಕಗೆ ಮನವಿ ಮಾಡಿದ್ದಾರೆ. ಅಲ್ಲದೇ ಪರೀಕ್ಷೆ ಬರೆಯಲು ನಾನು ಕಪ್ಪು ಹಾಗೂ ನೀಲಿ ಬಣ್ಣದ ಪೆನ್ನುಗಳನ್ನು ಬಳಸಿರುವುದಾಗಿ ತಿಳಿಸಿದ್ದಾರೆ. ಸದ್ಯ ತುಷಾರ್ ತಂದೆ ಸಣ್ಣ ವ್ಯಾಪಾರವೊಂದನ್ನು ಮಾಡುತ್ತಿದ್ದು ಮಗನ ಸಾಧನೆಗೆ ಬೆಂಬಲವಾಗಿ ನಿಂತಿದ್ದಾರೆ ಹಾಗೂ ತುಷಾರ್ ಮುಂದೆ ಇಂಜಿನಿಯರ್ ಆಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ಸಾಧನೆ ಮಾಡಲು ಅಂಗವೈಕಲ್ಯತೆ ಅಡ್ಡಬರುವುದಿಲ್ಲ. ಕಲಿಕೆಯಲ್ಲಿ ಆಸಕ್ತಿವೊಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಇದೊಂದು ಸ್ಫೂರ್ತಿದಾಯಕ ಕಥೆ ಎಂದೇ ಹೇಳಬಹುದು. ಇದನ್ನೂ ಓದಿ:ಮೊದಲ ಬಾರಿಗೆ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಭಾರತೀಯ ಮಹಿಳಾ ಹಾಕಿ ತಂಡ