Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!

Dakshina Kannada

ಕಾಲಿಗೆ ಸರಪಳಿ ಬಿಗಿದು ಪದ್ಮಾಸನದಲ್ಲೇ ಸಮುದ್ರದಲ್ಲಿ ಈಜಿ ನಾಗರಾಜ ಖಾರ್ವಿಯಿಂದ ಗಿನ್ನೀಸ್ ರೆಕಾರ್ಡ್!

Public TV
Last updated: December 26, 2020 11:07 am
Public TV
Share
2 Min Read
MNG 1
SHARE

ಮಂಗಳೂರು: ಸಾಧನೆ ಮಾಡಬೇಕು ಅದು ಎಲ್ಲರೂ ಗುರುತಿಸುವಂತಾಗಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಅಂತೆಯೇ ಇಲ್ಲೊಬ್ಬರು ಅಪರೂಪದ ಸಾಧನೆಯನ್ನು ಮಾಡಿದ್ದಾರೆ. ಅದು ಕೂಡ ಕಾಲಿಗೆ ಸರಪಳಿ ಬಿಗಿದು, ಪದ್ಮಾಸನ ಹಾಕಿಕೊಂಡು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಮುದ್ರದಲ್ಲಿ ಈಜುವ ಮೂಲಕ. ಇವರ ಈ ಸಾಧನೆ ಅರ್ಹವಾಗಿಯೇ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್‍ನಲ್ಲಿ ದಾಖಲೆಯಾಗಿದೆ.

MNG RECORD 3

ಅಂದಹಾಗೆ ಇಷ್ಟೆಲ್ಲಾ ಸಾಧನೆಯನ್ನು ಮಾಡಿರುವ ಸಾಧಕನ ಹೆಸರು ನಾಗರಾಜ್ ಖಾರ್ವಿ. ಇವರು ವೃತ್ತಿಯಲ್ಲಿ ಶಿಕ್ಷಕರು. ಬಾಲ್ಯದಿಂದಲೇ ಈಜು ಬಲ್ಲವರಾಗಿದ್ದ ಇವರು ಅನೇಕ ವಿದ್ಯಾರ್ಥಿಗಳಿಗೆ ಈಜು ತರಬೇತಿಯನ್ನೂ ನೀಡಿದವರು. ಇವರು ಕೆಲ ವರ್ಷಗಳ ಹಿಂದೆ ಯೋಗಾಭ್ಯಾಸವನ್ನು ಕಲಿತಿದ್ದರು. ಈಜುವುದರಲ್ಲಿ ಯೋಗವನ್ನು ಯಾಕೆ ಅಳವಡಿಕೆ ಮಾಡಿಕೊಳ್ಳಬಾರದು ಎನ್ನುವ ಯೋಚನೆಯಂತೆ ಪದ್ಮಾಸನ ಹಾಕಿ ಈಜಲು ಅಭ್ಯಾಸ ಮಾಡಲಾರಂಭಿಸಿದರು. ಅದರ ಫಲವಾಗಿಯೇ ಇದೀಗ ಇಂಡಿಯಾ ಬುಕ್ ಆಫ್ ರೆಕಾಡ್ರ್ಸ್ ನಲ್ಲಿ ಈ ಸಾಧನೆ ದಾಖಲಾಗಿದೆ.

MNG RECORD 5

ಪ್ರವಾಸಿಗರ ನೆಚ್ಚಿನ ಬೀಚ್ ತಣ್ಣೀರುಬಾವಿಯಲ್ಲಿ ಕುತೂಹಲದಿಂದ ನೆರೆದಿದ್ದ ಜನರ ಮಧ್ಯೆ ನಾಗರಾಜ್ ಖಾರ್ವಿ ಅವರು ಕಡಲಿನಲ್ಲಿ ಸಾಧನೆ ಮಾಡಿದ್ರು. ನೂರಾರು ಜನರ ಸಮ್ಮುಖದಲ್ಲಿ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಬಿಗಿದು ಆಳ ಸಮುದ್ರಕ್ಕೆ ಇಳಿದೇ ಬಿಟ್ಟರು. ಬ್ರೆಸ್ಟ್ ಸ್ಟ್ರೋಕ್ ಮೂಲಕ ಈಜುತ್ತಾ ಒಂದು ಕಿಲೋ ಮೀಟರ್ ದೂರದ ಗುರಿಯನ್ನ ತಲುಪಿ ಇಂಡಿಯಾ ಬುಕ್ ಆಫ್ ರೆಕಾರ್ಡ್‍ಗೆ ಲಗ್ಗೆ ಇಟ್ಟರು. ಸಮುದ್ರದ ಅಬ್ಬರ ಅಲೆಗಳ ಒತ್ತಡದ ಮಧ್ಯೆಯೂ ನಾಗರಾಜ್ ಖಾರ್ವಿ 25 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ತಲುಪಿ ನೆರೆದಿದ್ದವರನ್ನ ಹುಬ್ಬೇರಿಸುವಂತೆ ಮಾಡಿದ್ರು.

MNG RECORD 6

ನಾಗರಾಜ್ ಖಾರ್ವಿ ಅವರು ಈ ರೀತಿ ಸಾಧನೆಯನ್ನು ಮಾಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ನಾಗರಾಜ್ ಖಾರ್ವಿ ಹಲವು ಸಾಧನೆಗಳನ್ನು ಮಾಡಿದ್ದಾರೆ. ತನ್ನ ಗುರುಗಳಾದ ಬಿಕೆ ನಾಯ್ಕ್ ಅವರ ಸಹಾಯದಿಂದ ಲಿಮ್ಕಾ ದಾಖಲೆಗೂ ಕಾಲಿಟ್ಟಿದ್ದಾರೆ. ಇದೇ ಸ್ಫೂರ್ತಿಯಿಂದ ಯೋಗಾಸನಕ್ಕೂ ಅಗತ್ಯ ಪ್ರೋತ್ಸಾಹ ಸಿಗಬೇಕೆನ್ನುವ ನಿಟ್ಟಿನಲ್ಲಿ ಪದ್ಮಾಸನ ಮೂಲಕ ತಣ್ಣೀರುಬಾವಿ ಬೀಚ್‍ನಲ್ಲಿ ವಿಶಿಷ್ಟ ಸಾಧನೆಗೈದರು. ಈ ವೇಳೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದೆಲ್ಲಕ್ಕೂ ಮಿಕ್ಕಿ ನಾಗರಾಜ್ ಖಾರ್ವಿ ಗುರುಗಳೇ ಮುಂದೆ ನಿಂತು ಶಿಷ್ಯನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

MNG RECORD 2

ವೃತ್ತಿಯಲ್ಲಿ ಶಿಕ್ಷಕರಾದರೂ ಈಜುಗಾರಿಕೆಯಲ್ಲಿ ಇವರು ತೋರಿಸಿರುವ ಸಾಧನೆಯು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಜಿನ ಜೊತೆಗೆ ಪದ್ಮಾಸನ ಭಂಗಿ ಮೂಲಕ ಯೋಗಾಸನವನ್ನು ಪ್ರಚುರಪಡಿಸಿದ ವಿಚಾರವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

MNG RECORD 1

TAGGED:Guinness Book of World RecordMangalurunagaraj kharviPublic TVseateacherಗಿನ್ನೀಸ್ ಬುಕ್ ಆಫ್ ರೆಕಾರ್ಡ್ನಾಗರಾಜ್ ಖಾರ್ವಿಪಬ್ಲಿಕ್ ಟಿವಿಮಂಗಳೂರುಶಿಕ್ಷಕಸಮುದ್ರ
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Chikkodi suicide
Belgaum

ಗಂಡನ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ – ಪತಿ ವಿರುದ್ಧ ಕೊಲೆ ಆರೋಪ

Public TV
By Public TV
42 minutes ago
Siddaramaiah 1 7
Bengaluru City

ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿ – ಕಾರ್ಯಪಾಲಕ ಎಂಜಿನಿಯರ್‌ ಅಮಾನತ್ತಿಗೆ ಸಿಎಂ ಆದೇಶ

Public TV
By Public TV
1 hour ago
IPL 2026 Riyan Parag Caught Vaping In Rajasthan Royals Dressing Room As Fresh Controversy
Cricket

ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ರಿಯಾನ್‌ ಪರಾಗ್‌ಗೆ ಪಂದ್ಯ ಶುಲ್ಕದ 25% ದಂಡ, 1 ಡೀಮೆರಿಟ್ ಪಾಯಿಂಟ್

Public TV
By Public TV
2 hours ago
MC SUDHAKAR
Bengaluru City

ಹಿಜಬ್‌, ಜನಿವಾರದಿಂದ ಸಮಸ್ಯೆಗೊಳಗಾದ ಪರೀಕ್ಷಾರ್ಥಿಗಳಿಗೆ ಸಿಟಿಇ ಮರುಪರೀಕ್ಷೆ: ಎಂ.ಸಿ ಸುಧಾಕರ್‌

Public TV
By Public TV
2 hours ago
SUPREME COURT
Latest

ಅವಳ ನೋವು, ಅವಮಾನ ಊಹಿಸಿ – ಅತ್ಯಾಚಾರ ಕೇಸಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

Public TV
By Public TV
2 hours ago
Google Gemini Misused in AI Deepfake Loan Scam Ahmedabad Police Expose Aadhaar OTP Bypass four arrested Cyber Crime
Crime

ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?