ಗದಗ: ರಾಜ್ಯದಲ್ಲಿ ಚುನಾವಣೆಗೆ ಇನ್ನೂ ಎರಡು ವರ್ಷ ಬಾಕಿ ಇದೆ. ಕಾಂಗ್ರೆಸ್‍ನಲ್ಲಿ ಮುಂದಿನ ಸಿಎಂ ಕಚ್ಚಾಟ ಜೋರಾಗಿದೆ. ಈ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮಾನಿಗಳು ಕಾರ ಹುಣ್ಣಿಮೆಗೆ ಸಿಂಗಾರಗೊಂಡ ಎತ್ತಿನ ಮೇಲೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಬರೆದು ಅಭಿಮಾನ ತೋರಿಸಿದ್ದಾರೆ.
Advertisement
ರಾಜ್ಯದ ವಿವಿಧ ಭಾಗಗಳಲ್ಲಿ ಕಾರ ಹುಣ್ಣಿಮೆಯನ್ನು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಈ ಬಾರಿ ಕೊರೊನಾದಿಂದಾಗಿ ಸರಳವಾಗಿ ಆಚರಿಸಲಾಗಿದೆ. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವ ಪ್ರತೀತಿ ಇದೆ. ಈ ಬಾರಿ ಕೂಡ ಸರಳವಾಗಿ ಗ್ರಾಮಸ್ಥರು ಕಾರ ಹುಣ್ಣಿಮೆ ಆಚರಿಸಿದ್ದಾರೆ. ಈ ಬಾರಿ ಎತ್ತಿಗೆ ಸಿಂಗರಿಸುವ ವೇಳೆ ಸಿದ್ದರಾಮಯ್ಯ ಅವರ ಅಭಿಮಾನಿಗಳು ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಕ್ಯಾಂಪೇನ್ ಮಾಡಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಅಭಿಮಾನಿ
Advertisement
Advertisement
ಗ್ರಾಮದಲ್ಲಿ ಕಾರ ಹುಣ್ಣಿಮೆ ದಿನ ಕರಿ ಹರಿಯುವ ಸಂಪ್ರದಾಯಕ್ಕೆ ತಕ್ಕಂತೆ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡಲಾಯಿತು. ಈ ಸಂದರ್ಭ ಮೆರವಣಿಗೆಗೆ ಸಿದ್ಧಗೊಳಿಸಿದ್ದ ಎತ್ತಿನ ಮೇಲೆ ಮುಂದಿನ ಸಿಎಂ ಸಿದ್ದರಾಮಯ್ಯ ಬರವಣಿಗೆಯೊಂದು ಎಲ್ಲರ ಗಮನ ಸೆಳೆಯುತ್ತಿತ್ತು. ಇದೀಗ ಸಿಎಂ ಕ್ಯಾಪೇನ್‍ನ ಎತ್ತಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
Advertisement