ವಾಷಿಂಗ್ಟನ್: ಖ್ಯಾತ ಅಂತರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, 2 ಕಾಲುಗಳು ಮುರಿದಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
This morning @LMTLASD responded to a roll-over collision in which @TigerWoods was injured. Please see our statement… pic.twitter.com/cSWOxKZC1w
— LA County Sheriffs (@LASDHQ) February 23, 2021
ಅಮೆರಿಕಾದ ಲಾಸ್ ಏಂಜಲಿಸ್ ಹೊರವಲಯದಲ್ಲಿ ನಡೆದ ಗಂಭೀರ ಅಪಘಾತದಲ್ಲಿ ವುಡ್ಸ್ ಕಾಲುಗಳು ಮುರಿದಿವೆ ಹಾಗೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಜನಕ ಸ್ಥಿತಿಯಲ್ಲಿ ವುಡ್ಸ್ ಇದ್ದಾರೆ ಎಂದು ತಿಳಿದು ಬಂದಿದೆ.
ಟೈಗರ್ ವುಡ್ಸ್ ಒಬ್ಬರೇ ಕಾರು ಚಲಾಯಿಸಿಕೊಂಡು ವೇಗವಾಗಿ ಪಾಲೊಸ್ ವರ್ಡಿಸ್ ಪ್ರದೇಶದಲ್ಲಿ ಹೋಗುತ್ತಿದ್ದರು. ಈ ವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ಬೆಟ್ಟದ ಪ್ರದೇಶದಲ್ಲಿ ಕಾರು ಉರುಳಿ ಕಂದಕಕ್ಕೆ ಬಿದ್ದಿದೆ. ಈ ವೇಳೆ ಕಾರಿನಲ್ಲಿ ಟೈಗರ್ ವುಡ್ಸ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಕಾರು ಅಪಘಾತವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ವುಡ್ಸ್ ಅವರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ವುಡ್ಸ್ಗೆ ಚಿಕಿತ್ಸೆಯನ್ನು ನೀಡಲಾಗುತ್ತಿದೆ.