– ಯುವಕರಿಂದ ಡೇಂಜರಸ್ ಡ್ರೈವಿಂಗ್
ವಿಜಯಪುರ: ಕಾರನ್ನು ವೇಗವಾಗಿ ಚಲಾಯಿಸುತ್ತಲೇ ಡ್ರೈವರ್ ಸೀಟ್ ಅದಲು ಬದಲು ಮಾಡಿ ಹುಚ್ಚು ಸಾಹಸ ಮಾಡಿದ ವಿಜಯಪುರದ ಯುವಕರ ಡೆಂಜರಸ್ ಡ್ರೈವಿಂಗ್ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಕಾರಲ್ಲಿ ಪ್ರವಾಸ ಹೊರಟ ವೇಳೆ ಯುವಕರ ಗುಂಪು ಹುಚ್ಚಾಟ ಮೆರೆದಿದೆ. ಕಾರು ವೇಗವಾಗಿ ಹೊರಟಿದ್ದ ವೇಳೆ ಈ ಹುಚ್ಚಾಟ ಮಾಡಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾಗಿದರೂ ಯುವಕರು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುವುದರ ಜೊತೆಗೆ ಎದುರಿಗೆ ಬಂದವರ ಪ್ರಾಣಕ್ಕು ಕೂಡ ಕುತ್ತು ಬರುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋವನ್ನು ಅಮನ್ ರಾಠೋಡ ಅನ್ನೋ ಯುವಕ ಅಪ್ಲೋಡ್ ಮಾಡಿದ್ದಾನೆ.
ವಿಜಯಪುರ ನಗರದ ವಿನಯ ಹುಲಸಗುಂದ ಹಾಗೂ ಮನೋಜ್ ಬಿರಾದಾರ್ ಎಂಬವರು ಕಾರ್ ಸೀಟ್ ಅದಲು ಬದಲು ಮಾಡಿದವರಾಗಿದ್ದು, ವಿನಯ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ಎಂದು ತಿಳಿದು ಬಂದಿದೆ. ಯುವಕರ ಈ ಹುಚ್ಚಾಟಕ್ಕೆ ಜಿಲ್ಲೆಯ ಜನರು ಕಿಡಿ ಕಾರಿದ್ದಾರೆ.