ಕಾರವಾರ: ಭಾರತದ ವಿಮಾನವಾಹಕ ನೌಕೆ ಐಎನ್‍ಎಸ್ ವಿಕ್ರಮಾದಿತ್ಯದಲ್ಲಿ ಇಂದು ಬೆಳಗ್ಗೆ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ, ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಬೆಂಕಿಯನ್ನು ನಂದಿಸಲಾಗಿದ್ದು, ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಯುದ್ಧ ನೌಕೆಯಲ್ಲಿ ನಾವಿಕರು ವಸತಿ ಇರುವ ಭಾಗದಿಂದ ಹೊಗೆ ಕಾಣಿಸಿಕೊಂಡಿದ್ದನ್ನು ಸಿಬ್ಬಂದಿ ಗಮನಿಸಿದ್ದಾರೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
Advertisement
Advertisement
ಹಡಗಿನ ಕರ್ತವ್ಯ ಸಿಬ್ಬಂದಿ ಬೆಂಕಿ ನಂದಿಸಲು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಬೆಂಕಿ ನಂದಿಸಿದ್ದಾರೆ. ಎಲ್ಲ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ದೊಡ್ಡ ಹಾನಿ ಸಂಭವಿಸಿಲ್ಲ. ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಕರ್ನಾಟಕದ ಕಾರವಾರದಲ್ಲಿ ಘಟನೆ ಸಂಭವಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
Advertisement
ಹಡಗಿನ ವಿಶೇಷವೇನು?
1978 ರಲ್ಲಿ ಈ ಹಡಗು ನಿರ್ಮಾಣಗೊಂಡು ರಷ್ಯಾದ ನೌಕಾನೆಲೆಯಲ್ಲಿ ಸೇವೆ ಸಲ್ಲಿಸಿ ನಂತರ 1996 ರಲ್ಲಿ ಇದಕ್ಕೆ ನಿವೃತ್ತಿ ನೀಡಲಾಯಿತು. ನಂತರ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರವರು 2004 ರಲ್ಲಿ ಒಪ್ಪಂದದ ಮೂಲಕ 97.4 ಕೋಟಿ ರೂಗಳನ್ನು ನೀಡಿ ಖರೀದಿಸಲು ಮಾತುಕತೆ ನಡೆದಿತ್ತು. ಇದೇ ಸಂದರ್ಭದಲ್ಲಿ ಇದರ ನವೀಕರಣ ನಡೆಸಿ ರಷ್ಯಾದ ಹೆಚ್ಚುವರಿ ಬೇಡಿಕೆಯಂತೆ ಯುಪಿಎ ಸರ್ಕಾರ 235 ಕೋ.ಡಾಲರ್(10,575 ಕೋ.ರೂಪಾಯಿ 2010ರ ದರದಲ್ಲಿ) ನೀಡಿ ನವೀಕರಣಗೊಂಡು 2013ರ ನವೆಂಬರಿನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಸಮರ್ಪಿಸಲಾಗಿತ್ತು.
44,500 ಟನ್ ತೂಕ, 284 ಮೀಟರ್ ಉದ್ದ, 60 ಮೀಟರ್ ಎತ್ತರ, 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ ಗಳನ್ನು ಹೊರುವ ಸಾಮಥ್ರ್ಯ ಹೊಂದಿದೆ. 1,600 ಸಿಬ್ಬಂದಿಗಳು, 22 ಅಂತಸ್ತುಗಳಿರುವ ನೌಕೆಗೆ ಒಮ್ಮೆ ಇಂಧನ ಭರ್ತಿಯಾದರೆ 13 ಸಾವಿರ ಕಿ.ಮೀ ಕ್ರಮಿಸುವ ಸಾಮಥ್ರ್ಯ ಹೊಂದಿದೆ. ಸದ್ಯ ಅರಬ್ಬಿ ಸಮುದ್ರದ ಗಡಿಯಲ್ಲಿ ಕಾವಲುಗಾರನಾಗಿ ಸೇವೆ ಸಲ್ಲಿಸುತ್ತಿದ್ದು ಕಾರವಾರದ ಕದಂಬ ನೌಕಾ ನೆಲೆ ಇದರ ತಂಗುದಾಣವಾಗಿದೆ.
ಈ ಹಿಂದೆ ನಡೆದಿತ್ತು ದುರಂತ!
ಈ ಹಿಂದೆ ಸಹ ವಿಕ್ರಮಾದಿತ್ಯ ಹಡಗಿನಲ್ಲಿ ಬಾಯ್ಲರ್ ಸಿಡಿದು ಉತ್ತರ ಪ್ರದೇಶ ಮೂಲದ ಲೆಫ್ಟಿನೆಂಟ್ ಕಮಾಂಡರ್ ಚೌಹಾಣ್ ಮೃತಪಟ್ಟು 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಇದರ ನಂತರ ಮುಂಬೈನಲ್ಲಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಿ ಗಡಿಯಲ್ಲಿ ಪಹರೆಗೆ ತೆರಳಿತ್ತು.