ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತನ ತಲೆಗೆ ಹೊಡೆದ ವೀಡಿಯೋ ವೈರಲ್ ಆದ ಬೆನ್ನಲ್ಲೇ ತೀವ್ರ ಚರ್ಚೆ ನಡೆಯುತ್ತಿದೆ. ಈ ವೀಡಿಯೋವನ್ನು ಬಿಜೆಪಿ ಸಹ ಟ್ವೀಟ್ ಮಾಡಿದೆ. ಹೀಗಾಗಿ ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಅವರ ಪುತ್ರನ ಹಳೆ ವೀಡಿಯೋವನ್ನು ಅಪ್ಲೋಡ್ ಮಾಡಿ ತಿರುಗೇಟು ನೀಡಿದೆ.
ಬಿಜೆಪಿ ನಾಯಕರು ಪಕ್ಷದಲ್ಲಿ ತಾವು ಕಲಿತ ಗೂಂಡಾಗಿರಿಯ ಪಾಠಗಳನ್ನು ಮನೆಯಲ್ಲಿ ತಮ್ಮ ಮಕ್ಕಳಿಗೂ ಕಲಿಸುತ್ತಾರೆ ಎನಿಸುತ್ತದೆ!
‘ನಿಂಗೆ ಬೂಟಿನಲ್ಲಿ ಒದೆಯುತ್ತೇನೆ’
‘ಬೂಟನ್ನು ಬಾಯಿಗೆ ಇಡುತ್ತೇನೆ’
ಪೊಲೀಸರ ಮೇಲೆ ದೌರ್ಜನ್ಯ ಎಸಗಿದ್ದ ಗೋವಿಂದ್ ಕಾರಜೋಳರ ಪುತ್ರನ ಉದಾಹರಣೆ ಇದು.
ಮೊದಲು ಬಿಜೆಪಿ ಸಂಸ್ಕಾರ ಕಲಿಯಲಿ.#ಬಿಜೆಪಿಗೂಂಡಾಪಡೆ pic.twitter.com/BLD9Am94MK
— Karnataka Congress (@INCKarnataka) July 10, 2021
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ನಾಯಕರು ಪಕ್ಷದಲ್ಲಿ ತಾವು ಕಲಿತ ಗೂಂಡಾಗಿರಿಯ ಪಾಠಗಳನ್ನು ಮನೆಯಲ್ಲಿ ತಮ್ಮ ಮಕ್ಕಳಿಗೂ ಕಲಿಸುತ್ತಾರೆ ಎನ್ನಿಸುತ್ತದೆ. ನಿಂಗೆ ಬೂಟಿನಲ್ಲಿ ಒದೆಯುತ್ತೇನೆ, ಬೂಟನ್ನು ಬಾಯಿಗೆ ಇಡುತ್ತೇನೆ ಎಂದು ಹೇಳಿ ಪೊಲೀಸರ ಮೇಲೆ ದೌರ್ಜನ್ಯ ಎಸಗಿದ್ದ ಗೋವಿಂದ ಕಾರಜೋಳರ ಪುತ್ರನ ಉದಾಹರಣೆ ಇದು. ಮೊದಲು ಬಿಜೆಪಿ ಸಂಸ್ಕಾರ ಕಲಿಯಲಿ ಎಂದು ಕಾಂಗ್ರೆಸ್ ಕಿಡಿಕಾರಿದೆ. ಇದನ್ನೂ ಓದಿ: ಕಾಮನ್ ಸೆನ್ಸ್ ಇಲ್ಲವಾ? – ಬೆಂಬಲಿಗನ ತಲೆಗೆ ಡಿಕೆಶಿ ಏಟು
2 ವರ್ಷದ ಹಿಂದೆ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಸುದ್ದಿಯ ಹಳೇಯ ವೀಡಿಯೋವಾಗಿದ್ದು, ಕಾಂಗ್ರೆಸ್ ಇದೀಗ ಟ್ವೀಟ್ ಮಾಡಿ ಬಿಜೆಪಿಗೆ ತಿರುಗೇಟು ನೀಡಿದೆ. ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಿಜೆಪಿಗೆ ಕಾಂಗ್ರೆಸ್ ಈ ವಿಡಿಯೋ ಬಿಡುಗಡೆ ಮಾಡಿ ತಿರುಗೇಟು ನೀಡಿದೆ.