ಮಂಡ್ಯ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಗಲ ಮೇಲೆ ಕೈ ಹಾಕಿಕೊಳ್ಳಲು ಬಂದ ಕಾರ್ಯಕರ್ತನ ತಲೆಗೆ ಬಾರಿಸಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿಯಲ್ಲಿ ಜರುಗಿದೆ.
ಕೆ.ಎಂ.ದೊಡ್ಡಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯವನ್ನು ವಿಚಾರಿಸಲು ಡಿ.ಕೆ.ಶಿವಕುಮಾರ್ ಬಂದಿದ್ದರು. ಈ ವೇಳೆ ಆಸ್ಪತ್ರೆಯ ಒಳಗಡೆಗೆ ಬರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಡಿ.ಕೆ.ಶಿವಕುಮಾರ್ ಹೆಗಲ ಮೇಲೆ ಕೈ ಹಾಕಲು ಪಯತ್ನಿಸಿದರು. ಕೂಡಲೇ ಕಾರ್ಯಕರ್ತನ ತಲೆಯ ಮೇಲೆ ಪಟಾರ್ ಎಂದು ಡಿ.ಕೆ.ಶಿವಕುಮಾರ್ ಹೊಡೆದರು. ಇದನ್ನೂ ಓದಿ: ಮುಂದಿನ ಸರ್ಕಾರ ಜೆಡಿಎಸ್ ಸರ್ಕಾರ : ನಿಖಿಲ್ ಕುಮಾರಸ್ವಾಮಿ
ತಲೆಯ ಮೇಲೆ ಹೊಡೆದ ಬಳಿಕ ನಿನಗೆ ಕಾಮನ್ ಸೆನ್ಸ್ ಇಲ್ಲವಾ? ಹೆಗಲ ಮೇಲೆ ಕೈ ಹಾಕ್ತಿಯಲ್ಲ ಎಂದು ಡಿಕೆಶಿ ಗದರಿದರು. ಡಿಕೆಶಿ ಅವರ ಈ ವರ್ತನೆಗೆ ಏಟು ತಿಂದ ಕಾರ್ಯಕರ್ತನಲ್ಲದೇ ಸುತ್ತಮುತ್ತ ಇದ್ದವರು ಸಹ ತಬ್ಬಿಬ್ಬಾದರು. ನಂತರ ವೀಡಿಯೋ ಮಾಡುತ್ತಿದ್ದವರಿಗೆ ವಿಡಿಯೋ ಡಿಲೀಟ್ ಮಾಡಿ ಎಂದು ಸಹ ಡಿ.ಕೆ.ಶಿವಕುಮಾರ್ ಹೇಳಿದರು. ಇದನ್ನೂ ಓದಿ: ಬೇಕಾದ್ರೆ ನನಗೊಂದು ಕಲ್ಲಿನ ಹಾರ ಹಾಕಿ, ಸುಗಂಧರಾಜ ಹಾರ ಬೇಡ : ಡಿಕೆಶಿ