ಚಾಮರಾಜನಗರ: ಕಾಡುಕೋಣದ ಜೊತೆ ಕಾದಾಡಿ ಹುಲಿಯೊಂದು ಮೃತಪಟ್ಟಿರುವ ಘಟನೆ ಹುಲಿ ಸಂರಕ್ಷಿತ ಪ್ರದೇಶವಾದ ಬಂಡಿಪುರ ವಲಯದ ಒಳಕಲ್ಲಾರೆ ಗಸ್ತಿನಲ್ಲಿ ನಡೆದಿದೆ.
ಮೃತ ಹೆಣ್ಣು ಹುಲಿಯು 9-10 ವರ್ಷ ಎಂದು ಅಂದಾಜಿಸಲಾಗಿದ್ದು, ಮೇಲ್ನೋಟಕ್ಕೆ ಕಾಡುಕೋಣದ ಜೊತೆ ಕಾದಾಟದಿಂದ ಮೃತಪಟ್ಟಿರುವುದು ಕಂಡು ಬಂದಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಕಾದಾಟದಿಂದ ಗಾಯಗೊಂಡಿರುವುದು ಖಚಿತವಾಗಿದೆ. ಇದನ್ನೂ ಓದಿ: ಏನ್ ಹೇಳ್ಬೇಕೋ ಅದನ್ನು ಕರ್ನಾಟಕದಲ್ಲೇ ಹೇಳ್ತೀನಿ: ಅರುಣ್ ಸಿಂಗ್
ಹುಲಿಯ ಉಗುರು, ಹಲ್ಲು, ಇತರ ದೇಹದ ಅಂಗಾಂಗಳು ಸುರಕ್ಷಿತವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಪಶು ವೈದ್ಯ ಡಾ.ವಾಸೀಂ ಮಿರ್ಜಾ ಶವ ಪರೀಕ್ಷೆ ನಡೆಸಿದ ಬಳಿಕ ಮಾರ್ಗಸೂಚಿಯಂತೆ ಹುಲಿಯ ದೇಹವನ್ನು ಸುಡಲಾಗಿದೆ. ಐದು ದಿನಗಳ ಹಿಂದೆಯಷ್ಟೇ ಮದ್ದೂರು ವಲಯದಲ್ಲಿ ಹುಲಿಯ ಕಳೇಬರವೊಂದು ಪತ್ತೆಯಾಗಿತ್ತು. ಇದನ್ನೂ ಓದಿ: ಯಡಿಯೂರಪ್ಪ ಸಮರ್ಥ ನಾಯಕ, ಅವರನ್ನೇ ಮುಂದುವರಿಸಿ – ವೀರಶೈವ ಲಿಂಗಾಯತ ಯುವ ವೇದಿಕೆ