– ಲಸಿಕೆ ಪಡೆಯಲು ಜನ ಹಿಂದೇಟು
ಚಿಕ್ಕಬಳ್ಳಾಪುರ: ಜನ ಲಸಿಕೆ ತೆಗೆದುಕೊಳ್ಳೋಕೆ ಹಿಂದೇಟು ಹಾಕ್ತಿದ್ದಾರೆ. ಜನರಿಗೆ ಕಾಡಿ ಬೇಡಿ ಲಸಿಕೆ ಹಾಕಲಾಗುತ್ತಿದೆ. ಜನರೇ ದಯ ಮಾಡಿ ಲಸಿಕೆ ಹಾಕಿಸಿಕೊಳ್ಳಿ ಅಂತ ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 5.500 ಕೋವಿಡ್ ಲಸಿಕಾ ಕೇಂದ್ರಗಳನ್ನ ಸಿದ್ಧಪಡಿಸಲಾಗಿದೆ. ಪ್ರತಿ ಕೇಂದ್ರದಲ್ಲೂ ಪ್ರತಿ ದಿನ 100 ಜನರಂತೆ ವ್ಯಾಕ್ಸಿನ್ ಹಾಕಿದರೂ 5 ಲಕ್ಷದ 50 ಸಾವಿರ ಮಂದಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಅದರೆ ಪ್ರತಿದಿನ ಕೇವಲ 1 ರಿಂದ ಒಂದೂವರೆ ಲಕ್ಷ ಜನ ಮಾತ್ರ ಲಸಿಕೆ ಪಡೆದುಕೊಳ್ತಿದ್ದಾರೆ ಎಂದು ಹೇಳಿದ್ದಾರೆ.
ಕೋವಿಡ್ ಲಸಿಕೆ ರಾಮಬಾಣವಿದ್ದಂತೆ 45 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಿ. ಕೊರೊನಾ ನ್ಯೂ ರೂಲ್ಸ್‍ಗೆ ಕೆಲವರ ಆಕ್ಷೇಪಾರ್ಹಗಳು ಬರ್ತವೆ. ಆದರೆ ಆರೂವರೆ ಕೋಟಿ ಜನರ ಹಿತದೃಷ್ಟಿಯಿಂದ ನಿಬರ್ಂಧಗಳನ್ನ ಹೇರಲಾಗಿದೆ. ಕೊರೊನಾ ಕಡಿಮೆ ಆಗುವವರೆಗೆ ನಿಯಮ ಪಾಲನೆ ಮಾಡಿ. ಸೋಂಕು ಕಡಿಮೆ ಮಾಡುವ ದೃಷ್ಟಿಯಿಂದ ಕೆಲವು ಮಾರ್ಗ ಸೂಚಿಗಳನ್ನು ಹಾಕಿದ್ದೇವೆ. ಒಬ್ಬ ವ್ಯಕ್ತಿಯ ಒಂದು ಚಟುವಟಿಕೆಗಾಗಿ ನಿಬರ್ಂಧ ಮಾಡಿಲ್ಲ. ಕೊರೊನಾ ಕಡಿವಾಣ ಮಾಡುವ ಉದ್ದೇಶದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಟಕೊರೊನಾ ನಿಯಮಗಳನ್ನ ಜನ ಪಾಲನೆ ಮಾಡುವಂತೆ ಮನವಿ ಮಾಡಿದ್ದಾರೆ.