ಚಿತ್ರದುರ್ಗ: ಕಾಗಿನೆಲೆ ಮಹಾ ಸಂಸ್ಥಾನದ ಸ್ಥಾಪಕ ಅಧ್ಯಕ್ಷ ನಾನಾಗಿದ್ದೂ, ಕಾಗಿನೆಲೆ ಗುರುಪೀಠದ ಪ್ರಥಮ ಪಟ್ಟಾಧಿಕಾರಿಯೇ ಆರ್‍ಎಸ್‍ಎಸ್ ನವರಾಗಿದ್ದಾರೆ. ನಂಜನಗೂಡು ಮೂಲದ ಬಿರೇಂದ್ರಕೇಶವ ತಾರಕಾನಂದಪುರಿ ಸ್ವಾಮಿಗಳು ಮೊದಲ ಪೀಠಾಧಿಪತಿಯಾಗಿದ್ದಾರೆ. ಹೀಗಾಗಿ ನಮ್ಮ ಹೋರಾಟಕ್ಕೆ ಆರ್‍ಎಸ್‍ಎಸ್‍ಗೆ ಸಹಕಾರ ನೀಡಿದರೆ ತಪ್ಪೇನಿದೆ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
Advertisement
ಕುರುಬ ಸಮುದಾಯದ ಪಾದಾಯಾತ್ರೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವನಾಥ್ ಅವರು, ದೇಶದಲ್ಲಿ ಆರ್‍ಎಸ್‍ಎಸ್ ಸಂಸ್ಥೆಗೆ ಬಹಿಷ್ಕಾರ ಹಾಕಿಲ್ಲ. ಅಲ್ಲದೇ ಕುರುಬರ ಹೋರಾಟಕ್ಕೆ ಆರ್‍ಎಸ್‍ಎಸ್ ಸೇರಿದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದವರು ಬೆಂಬಲ ನೀಡಿದರೆ ಪಡೆಯುತ್ತೇವೆ. ಅದರಲ್ಲಿ ತಪ್ಪೇನಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
Advertisement
Advertisement
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಒಳ ಸಂಚಿದೆ. ಹಾಗೆಯೇ ಈ ದೇಶದಲ್ಲಿ ಆರ್‍ಎಸ್ ಎಸ್ ಹಿಂದೂ ಧರ್ಮವನ್ನು ಪ್ರತಿಪಾದನೆ ಮಾಡುತ್ತಿದೆ. ಈ ಹಿಂದೆ ಕೆಲವು ಲೀಡರ್ಸ್ ಗಳು ಆರ್‍ಎಸ್‍ಎಸ್ ಎಂದರೆ ಗುಮ್ಮಾ ಬಿಡ್ತಿದ್ದರು. ಆದರೆ ದೇಶದಲ್ಲಿ ಆರ್‍ಎಸ್‍ಎಸ್ ನಿಷೇಧಿತ ಸಂಘಟನೆಯಲ್ಲ. ಬ್ಯಾನ್ ಆಗಿಲ್ಲ ಎಂದರು.