– ಎಚ್‍ಡಿಕೆ ವಿರುದ್ಧ ಸಚಿವ ಸಿಟಿ ರವಿ ಟ್ವೀಟ್ ವಾಗ್ದಾಳಿ
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ರೂಢ ಸರ್ಕಾರದ ಸಚಿವರು ಹಾಗೂ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ನಡುವಿನ ಕೆಸರೆರಚಾಟ ಮುಂದುವರಿದಿದೆ.
ಕುಮಾರಸ್ವಾಮಿ ಅವರೊಂದಿಗೆ ಟ್ವೀಟ್ ಸಚಿವ ಸುಧಾಕರ್ ನಿನ್ನೆ ಟ್ವೀಟ್ ವಾರ್ ನಡೆಸಿದರೆ, ಇಂದು ಸಚಿವ ಸಿ.ಟಿ. ರವಿ ಮಾಜಿ ಸಿಎಂ ವಿರುದ್ಧ ಟ್ವೀಟ್ ವಾಗ್ದಾಳಿ ಮಾಡಿದ್ದಾರೆ. ಡ್ರಗ್ ಮಾಫಿಯಾ ಮೈತ್ರಿ ಸರ್ಕಾರವನ್ನು ಉರುಳಿಸಿತ್ತು ಎಂಬ ಎಚ್‍ಡಿಕೆ ಅವರ ಹೇಳಿಕೆಗೆ ಸಚಿವ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಸಿಎಂ ಆದ್ರಿ: ಸುಧಾಕರ್
Odd day ಕಾಂಗ್ರೇಸ್ ನನ್ನ ಸರಕಾರವನ್ನು ಬೀಳಿಸಿತು.
ಅನ್ನುವ ತಾವು
EvenDay ಡ್ರಗ್ ಮಾಫಿಯಾ ನನ್ನ ಸರಕಾರವನ್ನು ಬೀಳಿಸಿತು ಅನ್ನುತ್ತೀರಿ.
ಯಾವುದು ಸತ್ಯ- ಯಾವುದು ಮಿಥ್ಯ?
ಭಗವಂತನೇ ಬಲ್ಲ ಈ ನಾಲಿಗೆಯ ಪರಿಯ!!!
— C T Ravi ???????? ಸಿ ಟಿ ರವಿ (@CTRavi_BJP) September 1, 2020
ಟ್ವೀಟ್ ಮಾಡಿ ತಿರುಗೇಟು ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು, Odd day ಕಾಂಗ್ರೇಸ್ ನನ್ನ ಸರಕಾರವನ್ನು ಬೀಳಿಸಿತು. ಅನ್ನುವ ತಾವು EvenDay ಡ್ರಗ್ ಮಾಫಿಯಾ ನನ್ನ ಸರಕಾರವನ್ನು ಬೀಳಿಸಿತು ಅನ್ನುತ್ತೀರಿ. ಯಾವುದು ಸತ್ಯ- ಯಾವುದು ಮಿಥ್ಯ? ಭಗವಂತನೇ ಬಲ್ಲ ಈ ನಾಲಿಗೆಯ ಪರಿಯ! ಎಂದು ಹೇಳುವ ಮೂಲಕ ಎಚ್‍ಡಿಕೆ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ
ಅಲ್ಲದೇ, ನೀವೇ ಮುಖ್ಯಮಂತ್ರಿಯ ಸ್ಥಾನದಲ್ಲಿ ಕುಳಿತಿದ್ದಾಗ ಡ್ರಗ್ ಮಾಫಿಯಾ ನಿಮ್ಮ ಸರ್ಕಾರವನ್ನು ಬೀಳಿಸುವಷ್ಟು ಪ್ರಬಲವಾಗಿತ್ತೆ ಕುಮಾರಸ್ವಾಮಿಯವರೇ? ಒಂದು ಮಾಫಿಯಾವನ್ನು ಬಗ್ಗುಬಡಿಯದಷ್ಟು ದುರ್ಬಲವಾಗಿತ್ತೆ ತಮ್ಮ ಸರ್ಕಾರ ಮಾಜಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಬಗ್ಗೆ ಮಾತನಾಡ್ತಿದ್ದಾರೆ- ಸುಧಾಕರ್‌ಗೆ ಎಚ್‍ಡಿಕೆ ಟಾಂಗ್