ಧಾರವಾಡ: ಕಾಂಗ್ರೆಸ್ ಮತ್ತು ಭ್ರಷ್ಟಾಚಾರ ಒಂದೇ ನಾಣ್ಯದ ಮುಖಗಳು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನವರು ಭ್ರಷ್ಟಾಚಾರದ ರಕ್ತ ಬೀಜಾಸುರರು. ಸಿದ್ದರಾಮಯ್ಯನವರು ಭ್ರಷ್ಟಾಚಾರದ ಆರೋಪ ಮಾಡುವುದರಲ್ಲಿ ಅರ್ಥವಿದೆಯೇ? ಏಳು ವರ್ಷದಿಂದ ದೇಶದಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ, ಒಂದೂ ಆರೋಪ ಒಬ್ಬ ಮಂತ್ರಿ ಮೇಲೆಯೂ ಆಗಿಲ್ಲ. ಮಾಲಿನ್ಯ ಮಂಡಳಿ ವರ್ಗಾವಣೆ ಭ್ರಷ್ಟಾಚಾರದ ಆರೋಪ ಕಾಂಗ್ರೆಸ್ ನವರು ಮಾಡಿದ್ದಾರೆ. ತನಿಖೆ ಆಗಬೇಕು ಎನ್ನುತ್ತಿದ್ದಾರೆ, ದಾಖಲೆಗಳನ್ನು ಕೊಡಲಿ, ಸರ್ಕಾರ ತನಿಖೆ ಮಾಡುತ್ತದೆ ಎಂದರು.
ಸಚಿವ ಉಮೇಶ ಕತ್ತಿ ಉತ್ತರ ಕರ್ನಾಟಕದ ಸಿಎಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದವರು ಸಿಎಂ ಆಗಬೇಕು ಎಂಬುದು ನಿಜ. ಉಮೇಶ ಕತ್ತಿ ಮುಂದಿನ ಸಿಎಂ ಎಂದು ಹೇಳಿದ್ದಾರೆ. ನಾಳೆಯೇ ಆಗುತ್ತಾರೆ ಎಂದು ಅವರು ಹೇಳಿಲ್ಲವಲ್ಲ. ಅಲ್ಲದೆ ಉಮೇಶ ಕತ್ತಿ ಯಾವ ಹಿನ್ನೆಲೆಯಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಸಿಎಂ ಸ್ಥಾನದ ಅವಕಾಶ ಬರಬೇಕಿದೆ, ಆದರೆ ನಾಳೆ, ನಾಡಿದ್ದು, ಈ ವರ್ಷದಲ್ಲಿ ಅಂತಲ್ಲ, ಆದರೆ ಮುಂದೆ ಉತ್ತರ ಕರ್ನಾಟಕಕ್ಕೆ ಅವಕಾಶ ಬರೇಕಿದೆ, ಖಂಡಿತವಾಗಿಯೂ ಉತ್ತರ ಕರ್ನಾಟಕದವರು ಸಿಎಂ ಆಗಬೇಕು. ಆದರೆ ಇದೇ ಅವಧಿಯಲ್ಲಿ ಎಂದು ಅರ್ಥವಲ್ಲ ಎಂದರು.